ರಾಜ್ಯ

ಮೆಟ್ರೋ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ: ಸ್ಪಷ್ಟನೆ ಕೇಳಿದ ಹೈಕೋರ್ಟ್‌

Shilpa D

ಬೆಂಗಳೂರು: ಮೆಟ್ರೊ ರೈಲು ಸೇವೆ ಆರಂಭವಾದ ನಂತರ ಅದರ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ ಎಂಬ ನಿಯಮದ ಕುರಿತು ಹೈಕೋರ್ಟ್ ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್‌) ಸ್ಪಷ್ಟನೆ ಕೇಳಿದೆ.

ಜೊತೆಗೆ, ಜನಸಾಮಾನ್ಯರು ಸಾರ್ವಜನಿಕ ಸಾರಿಗೆ ಬಳಕೆ ಸೇರಿದಂತೆ ಕೆಲವು ಸೇವೆಗಳನ್ನು ಪಡೆಯಲು ಆರೋಗ್ಯ ಸೇತು ಆ್ಯಪ್‌ ಅಳವಡಿಕೆ ಕಡ್ಡಾಯಗೊಳಿಸಿರುವ ಕುರಿತು ವಿವರಣೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಆರೋಗ್ಯ ಸೇತು ಆ್ಯಪ್‌ ಕಡ್ಡಾಯಗೊಳಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಅರವಿಂದ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಎನ್‌.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ, ಈ ವಿವರಣೆ ಕೇಳಿದೆ. 

ಬಿಎಂಆರ್‌ಸಿಎಲ್‌ನ ಈ ಕ್ರಮ ಸ್ಮಾರ್ಟ್‌ಫೋನ್ ಇರುವವರು ಮತ್ತು ಇಲ್ಲದವರ ನಡುವೆ ತಾರತಮ್ಯಹುಟ್ಟುಹಾಕಲಿದೆ. ನಾಗರಿಕರ ಖಾಸಗಿತನದ ಹಕ್ಕನ್ನೂ ಕಸಿದುಕೊಳ್ಳಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು. 

SCROLL FOR NEXT