ರಾಜ್ಯ

115 ಸಂಚಾರಿ ರಾಪಿಡ್ ಆ್ಯಂಟಿಜನ್ ಟೆಸ್ಟ್ ವಾಹನಕ್ಕೆ ಚಾಲನೆ ನೀಡಿದ ಬಿಬಿಎಂಪಿ ಮೇಯರ್

Manjula VN

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಂಟೇನ್ಮೆಂಟ್ ಪ್ರದೇಶ, ಕೊಳಗೇರಿ ಪ್ರದೇಶ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ರಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷಾ ಕಾರ್ಯಕ್ಕೆ ಮೇಯರ್ ಎಂ.ಗೌತಮ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು. 

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಶುಕ್ರವಾರ ಈ ನಿಟ್ಟಿನಲ್ಲಿ ಸಿದ್ದಪಡಿಸಿರುವೋ 115 ಸಂಚಾರಿ ರಾಪಿಡ್ ಆ್ಯಂಟಿಜನ್ ಟೆಸ್ಟ್ ವಾಹನಗಳಿಗೆ ಚಾಲನೆ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 

ಕೊಳಗೇರಿ, ಪ್ರದೇಶ ಕಂಟೈನ್ಮೆಂಟ್ ಪ್ರದೇಶ, ಪೌರ ಕಾರ್ಮಿಕರ ಕಾಲೋನಿಗಳು ಹಾಗೂ ತೀನ ಉಸಿರಾಟ ಸಮಸ್ಯೆ ಮತ್ತು ಶೀತ ಜ್ವರದ ಲಕ್ಷಣಗಳು ಇರುವವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ರಾಪಿಡ್ ಆ್ಯಂಟಿಜೆನ್ ಟೆಸ್ಟ್'ಗೆ ಹೋಗುವ ಸಿಬ್ಬಂದಿಗೆ ವಲಯವಾರು ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಮನೆ ಮನೆ ಸಮೀಕ್ಷೆ ಕೈಗೊಂಡು ಕೊರೋನಾ ಲಕ್ಷಣಗಳಿರುವ ಸಾರ್ವಜನಿಕರಿಗೆ ರಾಪಿಡ್ ಟೆಸ್ಟ್ ಮಾಡಲು ಪೂರ್ವ ವಲಯಕ್ಕೆ 40, ಪಶ್ಚಿಮ ವಲಯಕ್ಕೆ 40, ದಕ್ಷಿಣ ವಲಯಕ್ಕೆ 35, ಬೊಮ್ಮನಹಳ್ಳಿ 20, ದಾಸರಹಳ್ಳಿ 12, ಯಲಹಂಕ 15, ಆರ್.ಆರ್.ನಗರ 20, ಮಹದೇವಪುರ ವಲಯಕ್ಕೆ 20 ಹಾಗೂ ಬೆಂಗಳೂರು ನಗರ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶಗಳಿವೆ 12 ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ವಲಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. 

ಉಪ ಮೇಯರ್ ರಾಮಮೋಹನ ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ ರಾಜು, ಮಾನ್ಯ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು. 

SCROLL FOR NEXT