ರಾಜ್ಯ

ಬೆಳಗಾವಿ: ಆಸ್ಪತ್ರೆಗೆ ದಾಖಲಾಗಿದ್ದರೂ, ನೋವಿನಿಂದ ನರಳಾಡಿ ಸೋಂಕಿತ ವೃದ್ಧ ಸಾವು!

Manjula VN

ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಕೋವಿಡ್ ಐಸೋಲೇಷನ್ ವಾರ್ಡ್ ನಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ನೋವಿನಿಂದ ನರಳುತ್ತಿದ್ದ ವೃದ್ಧನಿಗೆ ಸೂಕ್ತ ಚಿಕಿತ್ಸೆ ಸಿಗದೆ ನೋವಿನಿಂದ ನರಳಾಡಿ ಸಾವನ್ನಪ್ಪಿರುವ ಅಮಾನವೀಯ ಘಟನೆ ಇದೀಗ ಬೆಳಕಿಗೆ ಬಂದಿದೆ. 

ವೃದ್ಧ ನೋವಿನಿಂದ ನರಳಾಡುತ್ತಿರುವುದನ್ನು ಇದೇ ವಾರ್ಡ್ ನಲ್ಲಿ ದಾಖಲಾಗಿದ್ದ ಮತ್ತೊಬ್ಬ ರೋಗಿ ವಿಡಿಯೋ ಮಾಡಿದ್ದಾರೆ, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್ ಆಗಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗತೊಡಗಿದೆ. 

ವಿಡಿಯೋದಲ್ಲಿ ವೃದ್ಧ ವ್ಯಕ್ತಿ ಹೊಟ್ಟೆನೋವಿನಿಂದ ನರಳಾಡುತ್ತಿರುವ ಆಕ್ರಂದನ ಮುಗಿಲು ಮುಟ್ಟಿರುವಂತೆ ಕಂಡು ಬಂದಿದೆ. ಆದರೆ, ವೈದ್ಯರಾಗಲೀ, ಸಿಬ್ಬಂದಿಯಾಗಲೀ ವೃದ್ಧನಿಗೆ ಯಾವುದೇ ಚಿಕಿತ್ಸೆ ನೀಡಲು ಮುಂದಾಗಿದೆ ಅಮಾನವೀಯ ಪ್ರದರ್ಶಿಸಿರುವುದು ಭಾರೀ ಟೀಕೆಗೆ ಕಾರಣವಾಗಿದೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ 65 ವರ್ಷದ ಸೋಂಕಿತ ಲಿವರ್ ಸಮಸ್ಯೆಯಿಂದ ನಗರದ ಖಾಸಿ ಆಸ್ಪತ್ರೆಯೊಂದಕ್ಕೆ ದಾಖಲಾಗಲು ಆಗಮಿಸಿದ್ದ. ಆದರೆ, ಆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿನ ಹಾಸಿಗೆಗಳೆಲ್ಲವೂ ಭರ್ತಿಯಾಗಿದ್ದರಿಂದ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗಂಟಲು ದ್ರವ ಸಂಗ್ರಹಿಸಿದ ವೈದ್ಯರು ಪರೀಕ್ಷಿಸಿದಾಗ ಆತನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. 

ಹೀಗಾಗಿ ಆತನನ್ನು ಐಸೋಲೇಷನ್'ಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ರಾತ್ರಿ ಹೊಟ್ಟೆನೋವಿನಿಂದ ಬಾಧೆ ತಾಳಲಾರದೇ ವೃದ್ಧ ಕೋವಿಡ್ ವಾರ್ಡ್ ನಲ್ಲೇ ನರಳಾಡುತ್ತಿರುವ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೃದ್ಧ ನರಳಾಡಿದರೂ ಆತನಿಗೆ ಸೂಕ್ತ ಚಿಕಿತ್ಸೆ ನೀಡಲಿಲ್ಲ. 5 ಗಂಟೆಗಳ ಬಳಿಕ ವೃದ್ಧನನ್ನು ನೆಲದ ಮೇಲೆಯೇ ಹಾಕಲಾಗಿದ್ದ ಹಾಸಿಗೆ ಮೇಲೆ ಮಲಗಿಸಲಾಗಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ. ಈ ವಿಷಯ ಆಸ್ಪತ್ರೆಯ ಅಧಿಕಾರಿಗಳು ವೃದ್ಧ ವ್ಯಕ್ತಿಯ ಮೊಮ್ಮಗನಿಗೆ ತಿಳಿಸಿದ್ದಾರೆ. ಆದರೆ, ವೃದ್ಧನ ಕುಟುಂಬದ ಸದಸ್ಯರೆಲ್ಲರೂ ಕ್ವಾರಂಟೈನ್ ನಲ್ಲಿರುವುದರಿಂದ ಏನು ಮಾಡಬೇಕೆಂಬುದು ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

SCROLL FOR NEXT