ಸಾಂದರ್ಭಿಕ ಚಿತ್ರ 
ರಾಜ್ಯ

ಲಾಕ್ ಡೌನ್ ಸಮಯದಲ್ಲಿ ಕರ್ನಾಟಕದಲ್ಲಿ ನಡೆದಿವೆ 40 ಸಾವಿರ ಮದುವೆ, ಬಳ್ಳಾರಿಯಲ್ಲಿ ಅತ್ಯಧಿಕ!

ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾರ್ಚ್ ತಿಂಗಳಿನಿಂದ ಆರಂಭವಾದ ಲಾಕ್ ಡೌನ್ ಮಧ್ಯಭಾಗದಲ್ಲಿ ಸ್ವಲ್ಪ ಸಮಯ ಸಡಿಲಿಕೆ ನೀಡಿದ್ದರೂ ಮತ್ತೆ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮುಂದುವರಿದಿದೆ.

ಬಳ್ಳಾರಿ: ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾರ್ಚ್ ತಿಂಗಳಿನಿಂದ ಆರಂಭವಾದ ಲಾಕ್ ಡೌನ್ ಮಧ್ಯಭಾಗದಲ್ಲಿ ಸ್ವಲ್ಪ ಸಮಯ ಸಡಿಲಿಕೆ ನೀಡಿದ್ದರೂ ಮತ್ತೆ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಮುಂದುವರಿದಿದೆ.

ಆದರೆ ಈ ಸಮಯದಲ್ಲಿ ಮದುವೆ ಮಾಡಬೇಕೆಂದವರು, ಮದುವೆ ಆಗಬೇಕೆಂದವರು ಕಡಿಮೆ ಸಂಖ್ಯೆಯಲ್ಲಿ ಅತಿಥಿಗಳನ್ನು ಸೇರಿಸಿಯಾದರೂ ಮಾಡಿ ಮುಗಿಸಿದ್ದಾರೆ. ಸಾಮೂಹಿಕ ಮದುವೆ ಕಾರ್ಯಕ್ರಮಗಳು, ಬೃಹತ್ ಸಂಖ್ಯೆಯಲ್ಲಿ ಮದುವೆಗೆ ಜನ ಸೇರುವುದಕ್ಕೆ ಸರ್ಕಾರ ತಡೆ ನೀಡಿದರೂ ಕೂಡ ಮದುವೆ ದಾಖಲಾತಿಗಳ ಪ್ರಮಾಣ ಮಾತ್ರ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಕಡಿಮೆಯೇನೂ ಆಗಿಲ್ಲ ಎನ್ನುತ್ತದೆ ವರದಿ.

ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ 40 ಸಾವಿರಕ್ಕೂ ಹೆಚ್ಚು ಮದುವೆಗಳಾಗಿದ್ದು ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು 12 ಸಾವಿರದಷ್ಟು ಮದುವೆಗಳು ನಡೆದಿವೆಯಂತೆ. ಸಾಮಾನ್ಯವಾಗಿ ಇತರ ಸಮಯಗಳಲ್ಲಾದರೆ ಬಹುತೇಕ ಮದುವೆಗಳು ದಾಖಲಾಗುವುದೇ ಇಲ್ಲ. ಆದರೆ ಈ ಬಾರಿ ಮದುವೆಗೆ ಮುನ್ನ ದಾಖಲಾತಿ ಮಾಡಿಕೊಳ್ಳಲೇಬೇಕಾಗಿದ್ದರಿಂದ ಅಂಕಿಅಂಶ ಸಿಕ್ಕಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮದುವೆ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ ಎಂದು ಜಿಲ್ಲಾ ವಿವಾಹ ದಾಖಲಾತಿ ಅಧಿಕಾರಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವರ್ಷ ಲಾಕ್ ಡೌನ್ ನಿರ್ಬಂಧದಿಂದಾಗಿ ರಿಜಿಸ್ಟರ್ ಮದುವೆ ಜಾಸ್ತಿಯಾಗಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ 1,141 ಮದುವೆಗಳು ರಿಜಿಸ್ಟರ್ ಆಗಿದ್ದರೆ, ಕಳೆದ ಮೂರು ತಿಂಗಳಲ್ಲಿ 12,300 ಮದುವೆಗಳು ರಿಜಿಸ್ಟರ್ ಆಗಿವೆ ಎಂದು ಅಧಿಕಾರಿಗಳು ಸಂಖ್ಯೆಯ ಏರಿಕೆ ಬಗ್ಗೆ ಹೇಳುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ವಿಐಪಿ ಕುಟುಂಬದ ಮದುವೆಗಳು, ಬೃಹತ್ ಸಂಖ್ಯೆಯಲ್ಲಿ ಸೇರಿದ ಮದುವೆಗಳು ನೆರವೇರಿವೆ. ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ನಲ್ಲಿ ಕೂಡ ಮದುವೆಗಳಾಗಿವೆ.

50 ಜನರನ್ನು ಸೇರಿಸಿ ಮದುವೆ ಮಾಡಲು ಯೋಚಿಸಿದ್ದೆವು. ಆದರೆ ಸಂಬಂಧಿಕರ ಮಧ್ಯೆ ಭಿನ್ನಾಭಿಪ್ರಾಯ, ಅಸಮಾಧಾನ ಬೆಳೆಯಬಹುದು ಎಂದು ನಿಗದಿಪಡಿಸಿದ್ದ ದಿನಾಂಕವೇ ರಿಜಿಸ್ಟರ್ ಮದುವೆ ಆಗಲು ನಿರ್ಧರಿಸಿದೆವು. ಕೊರೋನಾ ಸಂಕಷ್ಟ ಮುಗಿದ ಮೇಲೆ ಎಲ್ಲರನ್ನೂ ಕರೆದು ಊಟ ಹಾಕಿಸುತ್ತೇವೆ ಎಂದು ಬಳ್ಳಾರಿಯ ನವದಂಪತಿ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!