ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಕೊರೋನಾ ಬಗ್ಗೆ ಅರಿವು-ಜಾಗೃತಿ ಹಾಗೂ ಜನರಿ ಮಾಹಿತಿ ನೀಡುವಲ್ಲಿ ಮಾಧ್ಯಮಗಳು ಉತ್ತಮ ಕೆಲಸ ಮಾಡುತ್ತಿವೆ ಎಂದು ಆದರೆ ಬಿತ್ತಿರಿಸುವ ಸುದ್ದಿಯಲ್ಲಿ ಸಮತೋಲನ ಅಗತ್ಯ ಎಂದು ನಿಮ್ಹಾನ್ಸ್ ಮನಶಾಸ್ತ್ರಜ್ಞ ಡಾ.ಕೆಎಸ್ ಚತುರ್ವೇದಿ ಹೇಳಿದ್ದಾರೆ.
ಕಳೆದ ಮೂರುವರೆ ತಿಂಗಳಿಂದ ಕೊರೋನಾ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆದರೆ ಅಗತ್ಯತೆಗಿಂತ ಹೆಚ್ಚಿನ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳಿಗೂ ಲಾಕ್ ಡೌನ್ ಬೇಕಾಗಿದೆ, ಏಕೆಂದರೆ ಅತಿಯಾದ ಸುದ್ದಿಯಿಂದ ಸಾರ್ವಜನಿಕರ ಕುತೂಹಲ ಮತ್ತಷ್ಚು ಹೆಚ್ಚುತ್ತದೆ. ವಿಕಾಸ್ ದುಬೆ ಹೊರತುಪಡಿಸಿ ಮಾಧ್ಯಮಗಳಲ್ಲಿ ಕೋವಿಡ್ ಹೊರತುಪಡಿಸಿ ಬೇರೆ ಯಾವುದೇ ಸುದ್ದಿ ಬಂದಿಲ್ಲ. ಹಾಗಾಗಿ ಸಮತೋಲನ ಅಗತ್ಯ ಎಂದು ನಿಮ್ಹಾನ್ಸ್ ನಿರ್ದೇಶತ ಡಾ,ಗಂಗಾಧರ್ ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಎಲ್ಲರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಅವರು ಮನೆಯ ಪರಿಕಲ್ಪನೆಯು ಕಳೆದುಹೋಗಿದೆ ಏಕೆಂದರೆ ಮನೆ ಒಂದು ಕುಟುಂಬಕ್ಕೆ ಕೆಲಸದ ಸ್ಥಳ, ಜಿಮ್ ಮತ್ತು ಶಾಲೆಯಾಗಿ ಮಾರ್ಪಟ್ಟಿದೆ. ಮಾಧ್ಯಮದವರು ಕೂಡ ಒತ್ತಡದಲ್ಲಿದ್ದಾರೆ. ಕೋವಿಡ್ ಪ್ರಕರಣಗಳ ಬಗ್ಗೆ ವರದಿ ಮಾಡುವ ಅಪಾಯವಿದೆ ಎಂದು ಡಾ.ಚತುರ್ವೇದಿ ಹೇಳಿದರು.
ಸೋಂಕಿನಿಂದ ಕಳಂಕವನ್ನು ಹೊರಹಾಕುವಲ್ಲಿ ಮಾಧ್ಯಮವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಈ ಕಳಂಕವು ಸಾಮಾಜಿಕ ಒಗ್ಗಟ್ಟನ್ನು ಹಾಳು ಮಾಡುತ್ತದೆ ಮತ್ತು ಜನರು ಆರಂಭಿಕ ಪರೀಕ್ಷೆಗೆ ಹೋಗುವುದನ್ನು ತಡೆಯುತ್ತದೆ. ಸೋಂಕು, ಚೇತರಿಕೆಯ ಪ್ರಮಾಣ ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ಸರಿಯಾದ ಮಾಹಿತಿ ನೀಡಲು ಮಾಧ್ಯಮ ಮಾತ್ರ ಸಹಾಯ ಮಾಡುತ್ತದೆ ಎಂದು ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನವೀನ್ ಕುಮಾರ್ ತಿಳಿಸಿದ್ದಾರೆ.
ಇಂಥಹ ಸಮಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾಗಿದೆ ,ಅವರು ಸತ್ಯ ಹೇಳಬೇಕು ಮತ್ತು ಕಿಲ್ಲರ್ ವೈರಸ್ ಸೂಪರ್ ಸ್ಪ್ರೆಡರ್‌ಗಳು ಎಂಬ ಭಯಾನಕ ವಿಶೇಷಣಗಳನ್ನು ಬಳಸಬಾರದು ಎಂದು ನಿಮ್ಹಾನ್ಸ್ ವೈದ್ಯೆ ಡಾ. ಕೆಎಸ್ ಮೀನಾ ಹೇಳಿದ್ದಾರೆ.