ರಾಜ್ಯ

ಶ್ರಾವಣ ಬಂತು ಶ್ರಾವಣ: ಲಾಕ್ ಡೌನ್ ಲೆಕ್ಕಿಸದೆ ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ!

Shilpa D

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನ ಸೇರಬಾರದು ಎಂಬ ನಿಯಮವಿದ್ದರೂ ಜನ ಅದನ್ನು ಲೆಕ್ಕಿಸದೇ ಸೋಮವಾರ ಬೆಳಗ್ಗೆ ಕೆಆರ್ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ಸೇರಿದ್ದರು.

ಶ್ರಾವಣ ಮಾಸ ಆರಂಭವಾಗುವುದರ ಜೊತೆಗೆ ಸೋಮವಾರ ಭೀಮನ ಅಮಾವಾಸ್ಯೆ ಪೂಜೆ ಇದ್ದ ಕಾರಣ ಹೂವು ಹಣ್ಣು ಖರೀದಿಗಾಗಿ ಜನ ಮುಗಿಬಿದ್ದಿದ್ದರು. ವ್ಯಾಪಾರಸ್ಥರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ವಿವಿಧ ಹಳ್ಳಿಗಳಿಂದ ಬಂದಿದ್ದರು.

ಆನೇಕಲ್, ಜಿಗಣಿ ಸೇರಿದಂತೆ ಹಲವು ಕಡೆಗಳಿಂದ ರೈತರು ಕೆ ಆರ್ ಮಾರುಕಟ್ಟೆಗೆ ಆಗಮಿಸಿದ್ದರು. ಲಾಕ್‌ಡೌನ್  ಮತ್ತು ಅನ್‌ಲಾಕ್ ಅವಧಿಯಲ್ಲಿಯೂ ಇಷ್ಟೊಂದು ಪ್ರಮಾಣದ ವ್ಯಾಪಾರ ಮಾಡಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ವ್ಯಾಪಾರಿಗಳು ಇಷ್ಟೊಂದು ಪ್ರಮಾಣದಲ್ಲಿ ಬರುತ್ತಾರೆಂದು ಬಿಬಿಎಂಪಿ ಮತ್ತು ಪೊಲೀಸರಿಗೆ ತಿಳಿದಿರಲಿಲ್ಲ, ಹೀಗಾಗಿ ಕಿಕ್ಕಿರಿದು ತುಂಬಿದ್ದ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು,

ಇವರೆಲ್ಲಾ ತಡರಾತ್ರಿ ಪ್ರಯಾಣಿಸಿ  ತಮ್ಮ ಉತ್ಪನ್ನಳನ್ನು ಮಾರಾಟ ಮಾಡಲು ಬೆಳಗಿನ ಜಾವವೇ ಹೇಗೆ ಬಂದರು ಎಂದು ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿತು.  ರಾಜ್ಯ ಸರ್ಕಾರದ ನಿಯಮದ ಪ್ರಕಾರ ಬೆಳಗ್ಗೆ 5ಗಂಟೆಯಿಂದ ಮಧ್ಯಾಹ್ನ 12 ಗಂಟೆವರಗೆ ಮಾತ್ರ  ವ್ಯಾಪಾರಕ್ಕೆ ಅವಕಾಶವಿದೆ. ಆದರೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ ಪರಿಣಾಮ ಬೆಳಗ್ಗೆ 8 ಗಂಟೆ
ವೇಳೆ ಎಲ್ಲಾ ಸಾಮಾಗ್ರಿಗಳು ಮಾರಾಟ ಮಾಡಿ ಮುಗಿದಿತ್ತು, ಆದರೆ ಸಾಮಾಜಿಕ ಅಂತರ ಮಾತ್ರ ಕನಸಿನ ಮಾತಾಗಿತ್ತು.

SCROLL FOR NEXT