ರಾಜ್ಯ

ಆರೋಗ್ಯ ಕಾರ್ಯಕರ್ತರಿಗಾಗಿ ಕೋವಿಡ್ ಕೇರ್ ಕೇಂದ್ರ ಆರಂಭಿಸಿದ ಬಾಗಲಕೋಟೆ ವೈದ್ಯ

Shilpa D

ಬಾಗಲಕೋಟೆ: ಆರೋಗ್ಯ ಕಾರ್ಯಕರ್ತರಿಗೆ ದಿನೇ ದಿನೇ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ವೈದ್ಯರೊಬ್ಬರು ಅವರಿಗಾಗಿ ಕೋವಿಡ್ ಕೇರ್ ಕೇಂದ್ರ ತೆರೆದಿದ್ದಾರೆ. ಈ ಕೋವಿಡ್ ಕೇರ್ ಕೇಂದ್ರದಲ್ಲಿ ವೈದ್ಯರಿಗೆ, ನರ್ಸ್ ಮತ್ತು ಅವರ ಕುಟುಂಬಸ್ಥರಿಗೆ ಕೂಡಲೇ ಚಿಕಿತ್ಸೆ ದೊರೆಯಲಿದೆ.

40 ಹಾಸಿಗೆಯುಳ್ಳ ಈ ಕೇಂದ್ರದಲ್ಲಿ ಮೊದಲಿಗೆ 20 ಸಾವಿರ ರು ಪಾವತಿಸಿ ಸೌಲಭ್ಯ ಪಡೆಯಬಹುದು ನಂತರ, 12 ಸಾವಿರ ರು ಪಾವತಿಸಬೇಕಾಗುತ್ತದೆ. ಇದರಲ್ಲಿ 150 ವೈದ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ 20 ಮಂದಿ ವೈದ್ಯರು ನೋಂದಾಯಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಬಾಗಲಕೋಟೆ ವೈದ್ಯರ ಕೋವಿಡ್ ಕೇರ್ ಕೇಂದ್ರದ ಅಧ್ಯಕ್ಷ ಡಾ.
ಎಸ್ ಎಲ್ ಪಾಟೀಲ್ ಹೇಳಿದ್ದಾರೆ.

ಕೋವಿಡ್ ಕೇರ್ ಕೇಂದ್ರಗಳಲ್ಲಿ ನರ್ಸ್ ಗಳು ಕರ್ತವ್ಯ ಮಾಡುವುದನ್ನು ಉತ್ತೇಜಿಸಲು ವೈದ್ಯರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ, 5 ಲಕ್ಷ ರು ವಿಮಾ ಸೌಲಭ್ಯ, ಮತ್ತು ವೈದ್ಯರ ಕುಟುಂಬದವರಿಗೆ ಉಚಿತ ಚಿಕಿತ್ಸೆ ಇರುತ್ತದೆ. ಉತ್ತಮ ವೇತನದ ಜೊತೆಗೆ ಪಿಪಿಇ ಕಿಟ್ ಮತ್ತು ವಸತಿ ಸೌಲಭ್ಯ ನೀಡಲಾಗುತ್ತದೆ, 

ಗದಗ, ಬಳ್ಳಾರಿ,ತುಮಕೂರುಗಳಲ್ಲಿಯೂ ಹಲವು ಖಾಸಗಿ ವೈದ್ಯರು ಸಿಸಿಸಿ ತೆರೆಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಸರ್ಕಾರದ ಸಿಸಿ ಕೇಂದ್ರಗಳಲ್ಲಿ ಸೌಲಭ್ಯ ಸರಿಯಾಗಿಲ್ಲದ ಪರಿಣಾಮ ಖಾಸಗಿಯಾಗಿ ತೆರೆಯಲು ಮುಂದಾಗಿದ್ದಾರೆ.

ದೇಶದಲ್ಲಿ ಕೋವಿಡ್ -19 ಮರಣ ಪ್ರಮಾಣವು ಶೇಕಡಾ 2.7 ರಷ್ಟಿದ್ದರೆ, ಆರೋಗ್ಯ ಕಾರ್ಯಕರ್ತರಲ್ಲಿ ಇದು ಶೇಕಡಾ 11.12 ರಷ್ಟಿದೆ ಎಂದು ಡಾ.ಪ್ರಶಾಂತ್ ಕಟಕೋಲ್ ಹೇಳಿದ್ದಾರೆ. ಇದೇ ರೀತಿಯ ಯೋಜನೆಯನ್ನು 20 ಹಾಸಿಗೆ ಕೇಂದ್ರವನ್ನು ವಿಜಯಪುರದಲ್ಲಿ ತೆರೆಯಲು ಯೋಜಿಸಲಾಗುತ್ತಿದೆ.

SCROLL FOR NEXT