ರಾಜ್ಯ

ದುರ್ಬಲ ಶಿಕ್ಷಕರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡಿ: ಬಿಬಿಎಂಪಿಗೆ ಸಚಿವ ಸುರೇಶ್ ಕುಮಾರ್ ಪತ್ರ

Manjula VN

ಬೆಂಗಳೂರು: ಶಿಕ್ಷಕರ ಸಂಘದ ಒತ್ತಡಕ್ಕೆ ಮಣಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಗುರುವಾರ ಪತ್ರ ಬರೆದಿದ್ದು, ದುರ್ಬಲ ಶಿಕ್ಷಕರಿಗೆ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ತಿಳಿಸಿದ್ದಾರೆ. 

ಜುಲೈ.9ರಂದು ಆದೇಶ ಹೊರಡಿಸಿದ್ದ ಬಿಬಿಎಂಪಿಯು 50 ವರ್ಷಕ್ಕಿಂತ ಮೇಲ್ಪಟ್ಟ ಶಾಲಾ ಶಿಕ್ಷಕರು, ವಿಕಲಚೇತನರು, ಅನಾರೋಗ್ಯ ಮತ್ತು ಗರ್ಭಿಣಿ ಶಿಕ್ಷಕರಿಗೆ ಬೆಂಗಳೂರಿನಲ್ಲಿ ಕೋವಿಡ್ ಕರ್ತವ್ಯದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿಸಿತ್ತು. 

ಆದೇಶದ ನಡುವೆಯೂ 50 ವರ್ಷದ ಮೇಲ್ಪಟ್ಟ ಶಿಕ್ಶಕರಿಗೆ, ವಾರ್ಡ್ ಮಟ್ಟದಲ್ಲಿ ರೋಗಿಗಳ ಮೇಲೆ ನಿಗಾ ಇಡಲು, ವೈದ್ಯಕೀಯ ನೇಮಕಾತಿಗಳನ್ನು ನೋಡಿಕೊಳ್ಳುವುದು ಮತ್ತು ದಾಖಲೆಗಳನ್ನು ನಿರ್ವಹಿಸುವ ಕರ್ತವ್ಯ ನೀಡಲಾಗಿತ್ತು. 

ಈ ಹಿನ್ನೆಲೆಯಲ್ಲಿ ಶಿಕ್ಷಕರ ಸಂಘಟನೆಗಳು ಸಚಿವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಪತ್ರ ಬರೆದಿರುವ ಸುರೇಶ್ ಕುಮಾರ್ ಅವರು, ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ದುರ್ಬಲ ಶಿಕ್ಷಕರಿ ಕೊರೋನಾ ಕರ್ತವ್ಯದಿಂದ ವಿನಾಯಿತಿ ನೀಡಿ ಎಂದು ತಿಳಿಸಿದ್ದಾರೆ. 

ಬೆಂಗಳೂರು ಉತ್ತರ ಮತ್ತು ದಕ್ಷಿಣ (ಶೈಕ್ಷಣಿಕ ವಿಭಾಗಗಳು) ದಲ್ಲಿ 5,000 ಸರ್ಕಾರಿ ಶಾಲಾ ಶಿಕ್ಷಕರು ವಿನಾಯಿತಿ ಪಡೆಯಲು ಅರ್ಹರಾಗಿದ್ದಾರೆ. ಈ ಬಗ್ಗೆ ಹಿರಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೂ, ಶಿಕ್ಷಕರಿಗೆ ಅಂತಹ ಯಾವುದೇ ವಿನಾಯಿತಿಗಳನ್ನು ನೀಡಲಾಗಿಲ್ಲ ತಿಳಿಸಿದರು. ಇದು ಹೇಗೆ ಸಾಧ್ಯ? ಹೀಗಾಗಿ ಸಚಿವರನ್ನು ಸಂಪರ್ಕಿಸಿ, ಬಿಬಿಎಂಪಿಗೆ ಪತ್ರ ಬರೆದು ಸೂಚನೆ ನೀಡುವಂತೆ ತಿಳಿಸಿದೆವು ಎಂದು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಹೇಳಿದ್ದಾರೆ. 

SCROLL FOR NEXT