ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಕಂಪನಿಯಿಂದ ದೇಶೀಯ ಅತ್ಯಾಧುನಿಕ ವೆಂಟಿಲೇಟರ್ ಅಭಿವೃದ್ಧಿ

ಭಾರತ ವೆಂಟಿಲೇಟರ್ ಗಳ ಕೊರತೆ ಎದುರಿಸುತ್ತಿರುವಾಗಲೇ, ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ-ಎನ್ಎಎಲ್ ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದ ಮೊದಲ ದೇಶೀಯ ವೆಂಟಿಲೇಟರ್ ಸ್ವಸ್ಥ್ ವಾಯುವವನ್ನು ಅಭಿವೃದ್ಧಿಪಡಿಸಿದೆ. 

ಬೆಂಗಳೂರು: ಭಾರತ ವೆಂಟಿಲೇಟರ್ ಗಳ ಕೊರತೆ ಎದುರಿಸುತ್ತಿರುವಾಗಲೇ, ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ-ಎನ್ಎಎಲ್ ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶದ ಮೊದಲ ದೇಶೀಯ ವೆಂಟಿಲೇಟರ್ ಸ್ವಸ್ಥ್ ವಾಯುವವನ್ನು ಅಭಿವೃದ್ಧಿಪಡಿಸಿದೆ. 

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ, ಉಸಿರಾಟ ಮತ್ತು ನಿದ್ರಾ ವೈದ್ಯ ಶ್ವಾಸಕೋಶ ಬದಲಾವಣೆ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯನಾರಾಯಣ ಮೈಸೂರು ಹಾಗೂ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ಸಿಎಸ್ಐಆರ್ ಇನ್ಸ್ ಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇನ್ಗ್ರೇಟಿವ್ ಬಯಾಲಜಿ-ಐಜಿಐಬಿ ನಿರ್ದೇಶಕರಾದ ಡಾ.ಅನುರಾಗ್ ಅಗರ್ವಾರ್ ಅವರ ವೈಜ್ಞಾನಿಕ ಮತ್ತು ವೈದ್ಯಕೀಯ ನೆರವಿನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. 

ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆ ಬಲವರ್ಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ಉದ್ಯಮಿಗಳು, ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ತುರ್ತಾಗಿ ವೆಂಟಿಲೇಟರ್ ಗಳ ಅಭಿವೃದ್ಧಿಗೆ ಮುಂದಾಗುವಂತೆ ಕರೆ ನೀಡಿದ್ದರು.

ಪ್ರಧಾನಮಂತ್ರಿಗಳ ಈ ಕರೆಗೆ ಸ್ಪಂದನೆ ನೀಡಿರುವ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧ್ ಮಂಡಳಿೃಸಿಎಸ್ಐಆರ್'ನ ಭಾಗವಾದ ಬೆಂಗಳೂರಿನ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯವು ಕೂಡಲೇ ಕಾರ್ಯೋನ್ಮುಖವಾಗಿ ದೇಶೀಯ ಸ್ವಸ್ಥವಾಯುವನ್ನು ಅಭಿವೃದ್ಧಿಪಡಿಸಿದೆ. 

ಪೋರ್ಟಬಲ್ ವೆಂಟಿಲೇಟರ್ ಅಭಿವೃದ್ಧಿಗೆ ಖ್ಯಾತ ಶ್ವಾಸಕೋಶ ತಜ್ಞರಾದ ಡಾ.ಸತ್ಯಾನಾರಾಯಣ ಮತ್ತು ಅನುರಾಗ್ ಅಗರ್ವಾಲ್ ಅವರ ನೆರವನ್ನು ಪಡೆದುಕೊಳ್ಳಲಾಗಿದೆ. 

ಫೆಬ್ರವರಿ ತಿಂಗಳಿನಲ್ಲಿಯೇ ವೆಂಟಿಲೇಟರ್ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಿದ್ದೆವು. ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು 2 ತಿಂಗಳು ಕಾಲಾವಕಾಶ ಬೇಕಾಯಿತು. ಸಾಮಾನ್ಯ ವೆಂಟಿಲೇಟರ್ ಖರೀದಿಗೆ ನಾವು ರೂ.60,000ದಿಂದ ರೂ.1 ಲಕ್ಷದವರೆಗೂ ಖರ್ಚು ಮಾಡಬೇಕಾಗುತ್ತದೆ. ಆದರೆ, ನಾವು ಅಭಿವೃದ್ಧಿಪಡಿಸಿರುವ ವೆಂಟಿಲೇಟರ್ ಗಳ ದರ ಇವುಗಳ ಅರ್ಧದಷ್ಟು ದರವನ್ನು ಹೊಂದಿದೆ. ವೆಂಟಿಲೇಟರ್ ಉಪಕರಣ ಹಲವು ಕಠಿಣ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದೆ. ಅತ್ಯಂತ ಸುರಕ್ಷಿತವಾದ ಸೇವೆಯನ್ನು ಇದು ನೀಡಲಿದ್ದು, ಉಸಿರಾಟ ಸಮಸ್ಯೆ ಇರುವ ಕೋವಿಡ್ ಅಥವಾ ಕೋವಿಡ್ ಸೋಂಕಿತರಲ್ಲದವರಿಗೆ ಚಿಕಿತ್ಸೆ ನೀಡಲು ಅತ್ಯಂತ ಉಪಕಾರಿಯಾಗಿದೆ ಎಂದು ಡಾ.ಮೈಸೂರು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT