ರಾಜ್ಯ

ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಕಾವೇರಿ ನೀರು ಪೂರೈಕೆ ಯೋಜನೆ ಕಾಮಗಾರಿ ಮತ್ತೆ ಆರಂಭ

Nagaraja AB

ಬೆಂಗಳೂರು: ಕೋವಿಡ್ -19 ಲಾಕ್ ಡೌನ್ ಕಾರಣ ಮೂರು ತಿಂಗಳ ಕಾಲ ಸ್ಥಗಿತಗೊಂಡಿದ್ದ   5,500 ಕೋಟಿ ವೆಚ್ಚದ ಕಾವೇರಿ ನೀರು ಪೂರೈಕೆಯ ವಿ ಪ್ರಾಜೆಕ್ಟ್ ನ್ನು ಮತ್ತೆ  ಆರಂಭಿಸಲಾಗಿದೆ. ಮಾರ್ಚ್ 2023ರೊಳಗೆ ಪ್ರತಿದಿನ ನಗರಕ್ಕೆ 775 ಮಿಲಿಯನ್ ಲೀಟರ್ ನಷ್ಟು ಕುಡಿಯುವ ನೀರಿನ ಪೂರೈಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಪ್ರಸ್ತುತ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯಿಂದ 1450 ಎಂಎಲ್ ಡಿ ಕಾವೇರಿ ನೀರನ್ನು ಬೆಂಗಳೂರಿಗೆ
ಪಂಪ್ ಮಾಡಲಾಗುತ್ತಿದೆ.ವಿ ಪ್ರಾಜೆಕ್ಟ್ ಹಂತದಿಂದ ಮಹದೇವಪುರ, ದಾಸರಹಳ್ಳಿ,ರಾಜರಾಜೇಶ್ವರಿನಗರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ಸುತ್ತಮುತ್ತಲಿನ 110 ಹಳ್ಳಿಗಳಿಗೆ ನೀರು ಪೂರೈಕೆಯಾಗಲಿದೆ. ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ಹೆಚ್ಚಳವಾಗಲಿದೆ.

ಲಾಕ್ ಡೌನ್ ಕಾರಣದಿಂದ ಏಪ್ರಿಲ್ ನಿಂದ ಜೂನ್ ವರೆಗೂ ಕೆಲಸವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಕೆಲಸವನ್ನು ಆರಂಭಿಸಲಾಗಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಯೋಜನೆಯನ್ನು ಎಲ್ ಅಂಡ್ ಟಿ, ಎಸ್ ಪಿಎಂಲ್ ಮೂಲಸೌಕರ್ಯ ಅಭಿವೃದ್ಧಿ ಕಂಪನಿ ಮತ್ತು ಮೆಗಾ ಎಂಜಿನಿಯರಿಂಗ್ ಪ್ರವೈಟ್
 ಲಿಮಿಟೆಡ್ ನಡುವಣ  ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. ತೊರೈಕಾಡನಹಳ್ಳಿಯಿಂದ ನೀರನ್ನು ಸಾಗಿಸಲು 80 ಕಿಲೋ ಪ್ರಸರಣದ ಪೈಪ್ ಲೈನ್ ಹಾಕಲಾಗುತ್ತಿದ್ದು, ಪಂಪಿಂಗ್ ಸ್ಟೇಷನ್ ಸ್ಥಾಪಿಸಲಾಗುತ್ತಿದೆ. ಬೆಂಗಳೂರು ಪೂರ್ವ ಮತ್ತು ಪಶ್ಚಿಮದಲ್ಲಿ ಎರಡು ಅಂತರ್ಜಲ ಜಲಾಶಯಗಳಿದ್ದು, ಹೆಬ್ಬಾಳದಲ್ಲಿ ಹೆಚ್ಚುವರಿ ಸಂಸ್ಕರಣಾ ಘಟಕ ತೆರೆಯಲಾಗುತ್ತಿದೆ. ಕೆಸಿ ವ್ಯಾಲಿ ಮತ್ತು ವೃಷಭಾವತಿ ವ್ಯಾಲಿ ಈ ಯೋಜನೆಯ ಭಾಗವಾಗಿವೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷ ಎನ್. ಜಯರಾಮ್ ತಿಳಿಸಿದ್ದಾರೆ.

ಎಲ್ ಅಂಡ್ ಟಿ ಕಾಮಗಾರಿಯನ್ನು ಆರಂಭಿಸಿದರೆ ಎಸ್ ಪಿಎಂಲ್ ಹಾರೋಹಳ್ಳಿಯಿಂದ ವಾಜರಹಳ್ಳಿಯವರೆಗಿನ 28 ಕಿಲೋ ಮೀಟರ್ ದೂರದ ಪ್ರಸರಣ ಲೈನ್ ಗೆ ಆಗಸ್ಟ್ 15 ರಂದು ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಜಪಾನಿನ ಇಂಟರ್ ನ್ಯಾಷನಲ್ ಕೊ ಆಪರೇಷನ್ ಏಜೆನ್ಸಿ, ಬಿಡಬ್ಲ್ಯೂಎಸ್ ಎಸ್ ಬಿಗೆ  4500 ಕೋಟಿ ಸಾಲ ನೀಡಲು ಮುಂದೆ ಬಂದಿದೆ.ಜಿಕಾ ಕಂಪನಿ ಶೇ, 84 ಹಣ ಹೂಡಿಕೆ ಮಾಡಲು ಸಿದ್ಧವಿದ್ದರೆ ಬಿಡಬ್ಲೂಎಸ್ ಎಸ್ ಬಿ ಹಾಗೂ ರಾಜ್ಯಸರ್ಕಾರ ತಲಾ ಶೇ.8 ರಷ್ಟು ಹಣವನ್ನು ನೀಡುತ್ತಿವೆ ಎಂದು ಅವರು ತಿಳಿಸಿದರು.

ಮಾರ್ಚ್ 2023ರೊಳಗೆ ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು, ಒಂದು ವೇಳೆ ಅಷ್ಟರೊಳಗೆ ಆಗದಿದ್ದರೆ ಎರಡು ಮೂರು ತಿಂಗಳು ವಿಳಂಬವಾಗಲಿದೆ ಎಂದು ಜಯರಾಮ್  ಹೇಳಿದರು.

SCROLL FOR NEXT