ರಾಜ್ಯ

ಕಾರ್ಗಿಲ್ ವಿಜಯ ದಿವಸ್: ಹುತಾತ್ಮ ಯೋಧರಿಗೆ ಮುಖ್ಯಮಂತ್ರಿ, ಸಚಿವರಿಂದ ಗೌರವ ನಮನ

Lingaraj Badiger

ಬೆಂಗಳೂರು: ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಇಡೀ ದೇಶ ಇಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುತ್ತಿದೆ. ದೇಶಕ್ಕಾಗಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ಇಂದು ವಿಶೇಷವಾಗಿ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಈ ಕಾರ್ಗಿಲ್ ವಿಜಯ ದಿವಸದಂದು ದೇಶಕ್ಕಾಗಿ ಹುತಾತ್ಮರಾದ ಎಲ್ಲ ಭಾರತೀಯ ಸೈನಿಕರಿಗೂ ನಮ್ಮ ಗೌರವ ನಮನಗಳನ್ನು ಸಲ್ಲಿಸೋಣ. ಭಾರತದ ಏಕತೆ, ಸಾರ್ವಭೌಮತೆಗಳನ್ನು ಸಂಭ್ರಮಿಸುವ ಜೊತೆಗೆ ಭಾರತೀಯ ಸೇನಾಪಡೆಗಳ ವೀರಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಬೆಂಬಲ ಹಾಗೂ ಹೆಮ್ಮೆಯ ಅಭಿನಂದನೆಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು, ದೇಶ ರಕ್ಷಣೆಗಾಗಿ ಹುತಾತ್ಮರಾದ ಎಲ್ಲ ವೀರ ಯೋಧರಿಗೆ ಸಲಾಂ ಹೇಳೋಣ. ಅವರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

ನಮ್ಮ ವೀರ ಯೋಧರು ದಿಟ್ಟ ಹೋರಾಟದ ಮೂಲಕ ಅತಿಕ್ರಮಣಕಾರರ ಸದ್ದಡಗಿಸಿ, ದಿಗ್ವಿಜಯ ಸಾಧಿಸಿದ ದಿನವಿದು. ದೇಶ ರಕ್ಷಣೆಗಾಗಿ ಹುತಾತ್ಮರಾಗಿ ಎಲ್ಲ ವೀರ ಯೋಧರಿಗೆ ಸಲಾಂ ಹೇಳೋಣ. ಅವರ ತ್ಯಾಗ ಬಲಿದಾನಗಳನ್ನು ಸಾರೋಣ ಜೈಹಿಂದ್ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಭಾರತ ಮಾತೆಗೆ ವಿಜಯಮಾಲೆ ತೊಡಿಸಿದ ವೀರಯೋಧರಿಗೆ ಕೋಟಿ ಕೋಟಿ ನಮನಗಳು ಎಂದು ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಭಾರತೀಯ ವೀರ ಪುತ್ರರು ಕೆಚ್ಚೆದೆಯಿಂದ ಹೋರಾಡಿ ಪಾಕಿಸ್ತಾನವನ್ನು ಬಗ್ಗು ಬಡೆದು ಕಾರ್ಗಿಲ್ ನಲ್ಲಿ ವಿಜಯ ಪತಾಕೆಯನ್ನು ಹಾರಿಸಿದ ಅವಿಸ್ಮರಣೀಯ ದಿನ. ಭಾರತಾಂಬೆಯ ರಕ್ಷಣೆಗಾಗಿ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಶೌರ್ಯ, ಸಾಹಸ, ತ್ಯಾಗ, ಬಲಿದಾನ ಎಂದಿಗೂ ಅಜರಾಮರ ಎಂದು ಗೌರವ ಸಲ್ಲಿಸಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಗಿಲ್ ವಿಜಯ ದಿವಸ! ಶಾಂತಿಯನ್ನು ಕದಡಲು ಪ್ರಯತ್ನಿಸಿದವರಿಗೆ ಆಪರೇಷನ್ ವಿಜಯ್ ಮೂಲಕ ದಿಟ್ಟ ಉತ್ತರ ನೀಡಿದ ನಮ್ಮ ವೀರ ಯೋಧರನ್ನು ನೆನಪಿಸಿಕೊಳ್ಳೋಣ ಎಂದು ಹೇಳಿದ್ದಾರೆ.

SCROLL FOR NEXT