ರಾಜ್ಯ

ಮೈಸೂರು: ಮೂರು ತಿಂಗಳಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಕ್ಕಿಲ್ಲ ಪಿಂಚಣಿ

Shilpa D

ಮೈಸೂರು: ದೇಶಾದ್ಯಂತ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಿದ್ದತೆ ನಡೆಯುತ್ತಿದೆ, ಆದರೆ ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕಳೆದ ಕೆಲವು ತಿಂಗಳುಗಳಿಂದ ಮಾಸಿಕ ಪಿಂಚಣಿ ನೀಡಿಲ್ಲ.

ಕಳೆದ ಮೂರು ತಿಂಗಳಿಂದ ತಮಗೆ ಪ್ರತಿ ತಿಂಗಳು ಬರುತ್ತಿದ್ದ 10 ಸಾವಿರ ರು ಮಾಸಿಕ ಪಿಂಚಣಿ ಹಣ ಬಂದಿಲ್ಲ ಎಂದು ಕೆಲವರು ಹೇಳಿದ್ದಾರೆ. ಕೊರೋನಾದಿಂದಾಗಿ ಹಣ ತಲುಪದೇ ಜೀವನ ದುಸ್ತರವಾಗಿದೆ ಎಂದು ಹೇಳಿದ್ದಾರೆ. ಈ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನ ಮತ್ತು ಔಷಧಿಗಳಿಗಾಗಿ ಈ ಹಣವನ್ನೇ ನಂಬಿಕೊಂಡಿದ್ದಾರೆ.

ಉಳಿಸಿಕೊಂಡಿರುವ ಪಿಂಚಣಿ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೊರೋನಾ ಕರ್ತವ್ಯದಲ್ಲಿ ನಿರತರಾಗಿದ್ದಾರೆ, ಹೀಗಾಗಿ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಮೈಸೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಎಂ.ಜಿ ಕೃಷ್ಣ ಮೂರ್ತಿ ಹೇಳಿದ್ದಾರೆ,

ಹಣಕಾಸು ಇಲಾಖೆಯಿಂದ ಈ ಮೊದಲು ನೇರವಾಗಿ ನಮ್ಮ ಖಾತೆ ಬರುತ್ತಿತ್ತು, ಆದರೆ ಹಲವು ತಿಂಗಳ ಹಿಂದೆ ಈ ಕಾರ್ಯವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ. ಆದರೆ ಸದ್ಯ ಅವರೆಲ್ಲಾ ಕೋವಿಡ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ.

ಸುಮಾರು 3,928 ಸ್ವಾತಂತ್ರ್ಯ ಹೋರಾಟಗಾರರು ಈ ಪಿಂಚಣಿಯನ್ನೇ ನಂಬಿದ್ದಾರೆ , ಶೇ.80 ರಷ್ಟು ಹೋರಾಟಗಾರರಿಗೆ ರಾಜ್ಯ ಸರ್ಕಾರದ ಹಣವನ್ನೇ ನಂಬಿದ್ದಾರೆ. ಆದರೆ ಈ ಸಂದರ್ಭದಲ್ಲಿ ಹಣವಿಲ್ಲದೇ ಪರದಾಡುವಂತ ಸ್ಥಿತಿ ಎದುರಾಗಿದೆ ಎನ್ನಲಾಗಿದೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಗಮನ ಹರಿಸಿ ಸೂಕ್ತ  ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

SCROLL FOR NEXT