ಸಿಂಧು ಬಿ ರೂಪೇಶ್ 
ರಾಜ್ಯ

ಜೀವ ಬೆದರಿಕೆ ಕರೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಹಠಾತ್ ವರ್ಗಾವಣೆ

ಕೊರೋನಾ ಸೋಂಕಿನ ಮಧ್ಯೆ ಹಠಾತ್ ಬೆಳವಣಿಗೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಜೇಂದ್ರ ಕೆ ವಿ ಅವರನ್ನು ನೇಮಿಸಿದೆ.

ಮಂಗಳೂರು: ಕೊರೋನಾ ಸೋಂಕಿನ ಮಧ್ಯೆ ಹಠಾತ್ ಬೆಳವಣಿಗೆಯೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ ಅವರ ಸ್ಥಾನಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ರಾಜೇಂದ್ರ ಕೆ ವಿ ಅವರನ್ನು ನೇಮಿಸಿದೆ.

ಸಿಂಧು ಅವರನ್ನು ಬೆಂಗಳೂರಿನ ವಿದ್ಯುನ್ಮಾನ ನಾಗರಿಕ ಸೇವೆ ಪೂರೈಕೆ ಮತ್ತು ಡಿಪಿ ಅಂಡ್ ಆರ್ (ಇ-ಆಡಳಿತ) ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಇನ್ನೂ ಒಂದು ವರ್ಷ ಸೇವೆ ಪೂರೈಸದಿರುವಾಗಲೇ ವರ್ಗಾವಣೆ ಆದೇಶ ಬಂದಿದ್ದು ಸಿಂಧು ಅವರಿಗೆ ಆಘಾತವನ್ನುಂಟುಮಾಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅವರು ದ.ಕ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕಾನೂನನ್ನು ಬೇಕಾಬಿಟ್ಟಿ ತಮ್ಮ ಕೈಗೆತ್ತಿಕೊಳ್ಳುವವರು ಮತ್ತು  ಗೋವು ಸೇರಿದಂತೆ ಇತರ ಪ್ರಾಣಿಗಳನ್ನು ಸಾಗಿಸುವವರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಂಧು ಅವರು ಮೊನ್ನೆ ಎಚ್ಚರಿಕೆ ನೀಡಿದ್ದರು. ಇದರ ನಂತರ ಅವರಿಗೆ ಸಾಕಷ್ಟು ಕೊಲೆ ಬೆದರಿಕೆ ಕರೆಗಳು ಬಂದಿದ್ದವು.ಈ ಸಂದರ್ಭದಲ್ಲಿಯೇ ಸರ್ಕಾರದಿಂದ ವರ್ಗಾವಣೆ ಆದೇಶ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಯ ರಾಷ್ಟ್ರಗಳ ಕ್ಷಮೆ ಕೋರಿದ Iran

ಶರಣಾಗತಿಯನ್ನೇ ಕಾರ್ಯತಂತ್ರವೆಂದು ತಪ್ಪಾಗಿ ತಿಳಿದುಕೊಂಡ ಮೋದಿ; ಎಫ್‌ಸ್ಟೀನ್ ಫೈಲ್ಸ್‌ ಭಯ: ಸಿದ್ದರಾಮಯ್ಯ

ಭಾರತದ ಬಗ್ಗೆ ಅಮೆರಿಕ ವಿದೇಶಾಂಗ ಸಚಿವರ ಹಗುರ ಹೇಳಿಕೆ: ಮೋದಿ, ಜೈಶಂಕರ್ ಕಾರಣ ಎಂದ ಪ್ರಿಯಾಂಕ್ ಖರ್ಗೆ!

ಒಮ್ಮೆ ಆದ್ರೂ ಭಾರತೀಯ ಅಭಿಮಾನಿಗಳ ಹೃದಯ ಒಡೆಯಬೇಕು ಅನಿಸುತ್ತಿದೆ: ಫೈನಲ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್!

'Tateeree'ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ಖ್ಯಾತ ರಾಪರ್ ಬಂಧನಕ್ಕೆ ಪೊಲೀಸರಿಂದ ಹುಡುಕಾಟ!

SCROLL FOR NEXT