ಕಮಲ್ ಪಂಥ್ 
ರಾಜ್ಯ

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಥಾನಕ್ಕೆ ಕಮಲ್ ಪಂಥ್?

ಸಿಲಿಕಾನ್ ಸಿಟಿ ಬೆಂಗಳೂರಿಗೆ ಶೀಘ್ರವೇ ನೂತನ ಆಯುಕ್ತರ ನೇಮಕವಾಗುವ ಸಾಧ್ಯತೆಯಿದೆ, ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂಥ್ ನೇಮಕ ಸಾಧ್ಯತೆಯಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಶೀಘ್ರವೇ ನೂತನ ಆಯುಕ್ತರ ನೇಮಕವಾಗುವ ಸಾಧ್ಯತೆಯಿದೆ, ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂಥ್ ನೇಮಕ ಸಾಧ್ಯತೆಯಿದೆ.

ಭಾಸ್ಕರ್ ರಾವ್ ಅವರ ಬ್ಯಾಚ್ ಮೇಟ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ರಾಜ್ಯ ಗುಪ್ತಚರ  ಇಲಾಖೆ ಹೆಚ್ಚುವರಿ ಎಡಿಜಿಪಿ ಕಮಲ್ ಪಂತ್ ನೇಮಕ ಮಾಡುವ ಸಾಧ್ಯತೆ ಇದೆ. ರಾವ್ ಮತ್ತು ಪಂಥ್ 1990 ರ ಐಪಿಎಸ್ ಬ್ಯಾಚ್ ನವರು.

ನಗರ ಪೊಲೀಸ್ ಆಯುಕ್ತ ಹುದ್ದೆಗೆ ಮೂವರು ಅಧಿಕಾರಿಗಳು ಮುಂಚೂಣಿಯಲ್ಲಿದ್ದಾರೆ, ಪಂಥ್ ಅವರ ಜೊತೆಗೆ ಸುನೀಲ್ ಅಗರ್ ವಾಲ್ ಮತ್ತು ಅಮೃತ್ ಪೌಲ್ ಕೂಡ ಆಕಾಂಕ್ಷಿಗಳಾಗಿದ್ದಾರೆ.

ಅಮೃತ್ ಪೌಲ್ ಅವರನ್ನು ಇದೇ ವರ್ಷದ ಜನವರಿ ಅಂತ್ಯದಲ್ಲಿ ಎಡಿಜಿಪಿಯಾಗಿ ಬಡ್ತಿ ನೀಡಲಾಗಿತ್ತು. ಕಮಿಷನರ್ ಅವರ ಜೊತೆಗೆ ನಗರದ ಮತ್ತಷ್ಟು ಹಿರಿಯ ಅಧಿಕಾರಿಗಳ ವರ್ಗಾವಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಪಿ.ಎಸ್. ಸಂಧು (1989) ಆಗಸ್ಟ್ 1 ರಂದು ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಬಡ್ತಿ ಪಡೆಯಲಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!