ಕೋವಿಡ್-19 ಸಂಕಷ್ಟದಲ್ಲಿ ಬಡ ಜನರ ಪ್ರಾಣ ಉಳಿಸಿದ ಬೆಳಗಾವಿಯ ವೈದ್ಯ 
ರಾಜ್ಯ

ಕೋವಿಡ್-19 ಸಂಕಷ್ಟದಲ್ಲಿ ಬಡ ಜನರ ಪ್ರಾಣ ಉಳಿಸಿದ ಬೆಳಗಾವಿಯ ವೈದ್ಯ

ಕೋವಿಡ್-19  ಜನರಲ್ಲಿ ಆತಂಕ, ಭೀತಿ ಉಂಟುಮಾಡುತ್ತಿದ್ದು, ಬೆಳಗಾವಿಯ ಜನತೆಗೆ ಸಂಕಷ್ಟದ ಸಮಯದಲ್ಲಿ ಜೀವ ಉಳಿಸಿದ್ದಾರೆ. 

ಅಥಣಿ: ಕೋವಿಡ್-19 ಜನರಲ್ಲಿ ಆತಂಕ, ಭೀತಿ ಉಂಟುಮಾಡುತ್ತಿದ್ದು, ಬೆಳಗಾವಿಯ ಜನತೆಗೆ ಸಂಕಷ್ಟದ ಸಮಯದಲ್ಲಿ ಜೀವ ಉಳಿಸಿದ್ದಾರೆ. 

ಅಥಣಿಯಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ಡಾ.ಮಲ್ಲಿಕಾರ್ಜುನ ಹಂಜಿ( 67) ದಿನದ 24 ಗಂಟೆಯೂ ಆರೋಗ್ಯ ಸೇವೆ ಒದಗಿಸುತ್ತಿರುವ ವೈದ್ಯರಾಗಿದ್ದಾರೆ.

ಅಖಿಲ ಭಾರತೀಯ ವೈದ್ಯಕೀಯ ಒಕ್ಕೂಟದ ದಾಖಲೆಗಳ ಪ್ರಕಾರ ಅಥಣಿಯಲ್ಲಿ 66 ವೈದ್ಯರಿದ್ದಾರೆ. ಆದರೆ ಬಹುತೇಕ ಮಂದಿ ವೈದ್ಯರು ಲಾಕ್ ಡೌನ್ ತೆರವುಗೊಂಡ ಬಳಿಕವೂ ಕ್ಲಿನಿಕ್ ತೆರೆದಿಲ್ಲ. ಇದರಿಂದಾಗಿ ಜನತೆಗೆ ಚಿಕಿತ್ಸೆ ಪಡೆಯುವುದು ಪ್ರಯಾಸದ ಸಂಗತಿಯಾಗಿದೆ. 

ಇಂತಹ ಪರಿಸ್ಥಿತಿಯಲ್ಲಿ ಡಾ. ಮಲ್ಲಿಕಾರ್ಜುನ್ ಹಂಜಿ(67) ತಾವು ನಡೆಸುತ್ತಿರುವ ಭಗೀರಥಿ ಕ್ಲಿನಿಕ್ ದಿನದ 24 ಗಂಟೆಗಳೂ ಆರೋಗ್ಯ ಸೇವೆಗೆ ತೆರೆದಿರುತ್ತದೆ. ರೋಗಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವ ಡಾ.ಮಲ್ಲಿಕಾರ್ಜುನ್ ಹಂಜಿ, ರೋಗಿಗಳಿಗೆ ಧೈರ್ಯ ತುಂಬಿ ಅಗತ್ಯವಿದ್ದಲ್ಲಿ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ.

ಬೆಳಗಾವಿಯ ಜೆಎನ್ಎಂಸಿ ಕಾಲೇಜಿನಲ್ಲಿ ಎಂಬಿಬಿಎಸ್ ಕೋರ್ಸ್ ವ್ಯಾಸಂಗ ಮಾಡಿದ್ದು, 1980 ರಿಂದ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ. 40 ವರ್ಷಗಳು ಸೇವೆ ಸಲ್ಲಿಸಿರುವ ಡಾ.ಮಲ್ಲಿಕಾರ್ಜುನ ಹಂಜಿ ತಾವು ಈ ರೀತಿ ಜನಸೇವೆ ಮಾಡುವುದಕ್ಕೆ ಪ್ರೇರಣೆ ತಮ್ಮ ತಂದೆಯ ತತ್ವ, ನೀತಿಯ ಬೋಧನೆಗಳು ಎಂದು ಸ್ಮರಿಸಿದ್ದಾರೆ. 
 
ಅಗತ್ಯವಿರುವ ಜನರಿಗೆ ಸಹಾಯ ಮಾಡುವಾಗ ಸಮಯ, ಜನರ ಗುರುತನ್ನು ನೋಡಬೇಡ, ಅದೇ ನಿಜವಾದ ದೇವರ ಪೂಜೆ ಎಂದು ಹೇಳಿದ್ದರು, ನನ್ನ ತಂದೆಯ ಈ ಮಾತುಗಳೇ ನನಗೆ ಸ್ಪೂರ್ತಿ ಎಂದು ಮಲ್ಲಿಕಾರ್ಜುನ ಹಂಜಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!