ರಾಜ್ಯ

ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯ!

Nagaraja AB

ಬೆಂಗಳೂರು: ಅಂತರ ರಾಜ್ಯಗಳಿಂದ ಬಂದು ಹೋಮ್ ಕ್ವಾರಂಟೈನ್ ನಲ್ಲಿರುವವರ ಮನೆ ವಿಳಾಸ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಕೋವಿಡ್-19 . ಕರ್ನಾಟಕ. ಗೌ.ಇನ್ ವೆಬ್ ಸೈಟ್ ನಲ್ಲಿ  ಹೋಮ್ ಕ್ವಾರಂಟೈನ್ ನಲ್ಲಿರುವವರ ಹೆಸರು ಮತಿತ್ತರ ವೈಯಕ್ತಿಕ ವಿಷಯಗಳನ್ನು ಹೊರತುಪಡಿಸಿ ಮನೆ ವಿಳಾಸವನ್ನು ಹಾಕಲಾಗುತ್ತಿದೆ. ಇವರಿಗೆ ಸಕಾರಾತ್ಮಕ ಬೆಂಬಲ ನೀಡುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ.

ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರು 14 ದಿನಗಳ ಹೋಮ್ ಕ್ವಾರಂಟೈನ್ ಗೆ ಒಳಗಾಗಬೇಕಾಗುತ್ತದೆ. ಮಹಾರಾಷ್ಟ್ರದಿಂದ ಬಂದವರು ಹೆಚ್ಚುವರಿಯಾಗಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಾಗುತ್ತದೆ ಎಂದು  ರಾಜ್ಯ ಕೋವಿಡ್-19 ವಾರ್ ರೂಮ್ ಉಸ್ತುವಾರಿ ಮುನಿಷ್ ಮೌದ್ಗಿಲ್ ತಿಳಿಸಿದರು.

ಈ ನಿರ್ಧಾರಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಸರ್ಕಾರದ ಕೊನೆಯ ಉಪಾಯದಂತೆ ತೋರುತ್ತದೆ. ಸ್ವಯಂ ನಿಯಂತ್ರಣ ಇದ್ದರೆ, ಇದರ ಅಗತ್ಯವಿರುತ್ತಿರಲಿಲ್ಲ.

ಯಾರಾದಾರೂ ಕ್ವಾರಂಟೈನ್ ಗೆ ಒಳಗಾದಾಗ ನೆರೆಹೊರೆಯವರು ತಿಳಿಯುವುದರಲ್ಲಿ ಯಾವುದೇ ಗೌಪ್ಯತೆ ಕಾಳಜಿ ಇಲ್ಲ ಎಂದು ಬೆಳ್ಳಂದೂರು ನಿವಾಸಿ ಜಯಕುಮಾರ್ ಹೇಳುತ್ತಾರೆ. ಆದಾಗ್ಯೂ,ಹೋಮ್ ಕ್ವಾರಂಟೈನ್ ಗೆ ಒಳಗಾಗುವವರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಾದರು ಏನಿರುತ್ತದೆ? ಎಂದು ಸಿಟಿಜನ್ ಆಫ್ ಬೆಂಗಳೂರು ಸದಸ್ಯರಾದ ತಾರಾ ಕೃಷ್ಣಸ್ವಾಮಿ ಪ್ರಶ್ನಿಸುತ್ತಾರೆ. 

ಕೊರೋನಾದೊಂದಿಗೆ ಇದನ್ನು ನಾವು ಸಾರ್ವಜನಿಕ ಆರೋಗ್ಯ ವಿಚಾರವೆಂದು ಪರಿಗಣಿಸುತ್ತಿಲ್ಲ, ಆದರೆ, ಪೊಲೀಸ್ ವಿಷಯವಾಗಿದೆ. ವಲಸೆ ಕಾರ್ಮಿಕರು, ವಲಸೆ ವಿದ್ಯಾರ್ಥಿಗಳು, ಹೊರಗಿನ ವಿಮಾನ ನಿಲ್ದಾಣದಿಂದ ಪ್ರಯಾಣಿಸಿದವರ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಏಲ್ಲಿಂದ ಬರುತ್ತಿದ್ದಾರೆ, ಏಲ್ಲಿಗೆ ಹೋಗುತ್ತಿದ್ದಾರೆ. ಅವರ ಕುಟುಂಬ ಸದಸ್ಯರು ಇದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಹಾಕಲಾಗಿದೆ  ಎಂದು ಮುನಿಷ್ ಮೌದ್ಗಿಲ್ ತಿಳಿಸಿದ್ದಾರೆ. 

SCROLL FOR NEXT