ಎಸ್ ಪಿ ರೋಡ್ ಸೀಲ್ ಡೌನ್ 
ರಾಜ್ಯ

ಮಹಿಳೆಗೆ ಕೊರೋನಾ ಸೋಂಕು: ಬೆಂಗಳೂರಿನ ಎಸ್ ಪಿ ರೋಡ್ ಸೀಲ್ ಡೌನ್

ಧರ್ಮರಾಯ ದೇವಸ್ಥಾನದ ವಾರ್ಡ್​ ವ್ಯಾಪ್ತಿಯಲ್ಲಿರುವ ಎಸ್​​ಪಿ ರೋಡ್​​​ ಅನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್​​ಡೌನ್ ಮಾಡಿದ್ದಾರೆ. ಧರ್ಮರಾಯ ಮುಖ್ಯರಸ್ತೆಯ ನಿವಾಸಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಬೆಂಗಳೂರು: ಧರ್ಮರಾಯ ದೇವಸ್ಥಾನದ ವಾರ್ಡ್​ ವ್ಯಾಪ್ತಿಯಲ್ಲಿರುವ ಎಸ್​​ಪಿ ರೋಡ್​​​ ಅನ್ನು ಬಿಬಿಎಂಪಿ ಅಧಿಕಾರಿಗಳು ಸೀಲ್​​ಡೌನ್ ಮಾಡಿದ್ದಾರೆ. ಧರ್ಮರಾಯ ಮುಖ್ಯರಸ್ತೆಯ ನಿವಾಸಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ. ಇವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಇನ್ನು ಕೋವಿಡ್​​-19 ರೋಗಿಯ ಟ್ರಾವೆಲ್ ಹಿಸ್ಟರಿ ನೋಡಿದಾಗ ತಾನು ಎಪ್​​ಪಿ ರೋಡ್​​ನಲ್ಲಿ ಪ್ರತಿನಿತ್ಯ ಓಡಾಟ ಮಾಡಿರುವುದಾಗಿ ಹೇಳಿದ್ದರು. ಹೀಗಾಗಿ ಮಧ್ಯಾಹ್ನದ ವೇಳೆಗೆ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ಇಡೀ ಎಸ್​ಪಿ ರೋಡ್​​ ಬಂದ್​​​ ಮಾಡಲು ನಿರ್ಧಾರ ಮಾಡಿದ್ದಾರೆ.

ಪರಿಕ್ಷೆ ವರದಿ ಬರುವ ಮುನ್ನವೇ ಆಕೆ ಹೊಟೆಲ್ ನಿಂದ ತೆರಳಿದ್ದಳು, ಆಕೆ ವಾಪಸ್ ಬರುವ ವೇಳೆಗೆ ವರದಿ ಬಂದಿದ್ದು ಪಾಸಿಟಿವ್ ಕಂಡುಬಂದಿದೆ. ಸದ್ಯ ಇಡಿ ಏರಿಯಾವೇ ಸೀಲ್ ಡೌನ್ ಆಗಿದೆ.

ಕ್ವಾರಂಟೈನ್ ಮಾರ್ಗ ಸೂಚಿಗಳನ್ನು ಸರಿಯಾಗಿ ಅನುಸರಿಸುವಂತೆ ಬಿಬಿಎಂಪಿ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಹಲವು ಮಂದಿ ತಮ್ಮ ಪರಿಕ್ಷೆ ವರದಿ ಬರುವ ಮುನ್ನವೇ ಹೋಟೆಲ್ ನಿಂದ ತೆರಳಿದ್ದಾರೆ. ಮಹಿಳೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದು ಜೂನ್ 27ರ ವರೆಗೂ ಸೀಲ್ ಡೌನ್ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದ್ದಾರೆ. ಇನ್ನೂ ಈ ಏರಿಯಾದ ಆರೋಗ್ಯ ಸಮೀಕ್ಷೆ ನಡೆಸಲು ಬಿಬಿಎಂಪಿ ತೀರ್ಮಾನಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಅಸಹ್ಯಕರವಾಗಿ ಫೋಟೋ ತೆಗೆಯುವವರಿಗೆ ಹೊಡೆಯಿರಿ: ಶರ್ಟ್ ಬಿಚ್ಚಿ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ!

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಪ್ರಮುಖ BRICS ಮಾರುಕಟ್ಟೆಗಳಿಗೆ ಭಾರತದ ರಫ್ತು ಶೇ 34ರಷ್ಟು ಏರಿಕೆ; ಚೀನಾಗೆ ಅತಿ ಹೆಚ್ಚು!

ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ...": ಅಜಿತ್ ದೋವಲ್