ರಾಜ್ಯ

ಪಾದರಾಯನಪುರ ಪುಂಡರ ಜಾಮೀನಿಗೆ ಕಾರ್ಪೋರೇಟರ್ ಶೂರಿಟಿ!

Srinivasamurthy VN

ಬೆಂಗಳೂರು: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ 126 ಮಂದಿ ಆರೋಪಿಗಳ ಜಾಮೀನಿಗೆ ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರೇ ಶ್ಯೂರಿಟಿ ನೀಡಿದ್ದಾರೆ ಎಂಬ ಮಾಹಿತಿ ಬಯಲಾಗಿದೆ.

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಪಾದರಾಯನಪುರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ಆರೋಪಿಗಳ ಪೈಕಿ ತಾವು 120 ಮಂದಿಗೆ ಜಾಮೀನು ನೀಡಿರುವುದಾಗಿ ಕಾರ್ಪೋರೇಟರ್ ಇಮ್ರಾನ್ ಪಾಷಾ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಮಾಧ್ಯಮದೊಂದಿಗೆ ಫೋನ್ ಮೂಲಕ ಮಾತನಾಡಿದ ಇಮ್ರಾನ್ ಪಾಷಾ ಅವರು, ಬಂಧಿತ 126 ಮಂದಿಯ ಪೈಕಿ 120 ಮಂದಿ ಅಮಾಯಕರು. ಅವರನ್ನು ಪೊಲೀಸರು ಸುಖಾಸುಮ್ಮನೆ ಬಂಧಿಸಿದ್ದಾರೆ. ಅಂದು ನಡೆದ ಗಲಾಟೆಯಲ್ಲಿ ಅವರು ಗಲಾಟೆಯಲ್ಲಿ ಪಾಲ್ಗೊಂಡಿರಲಿಲ್ಲ. ಬದಲಿಗೆ ಅಲ್ಲಿ ನಿಂತು ನೋಡುತ್ತಿದ್ದರು. ಇದನ್ನೇ ಸಾಕ್ಷಿಯಾಗಿ ಸ್ವೀಕರಿಸಿದ ಪೊಲೀಸರು ಅವರನ್ನೂ ಕೂಡ ಬಂಧಿಸಿದ್ದರು. ಇವರೆಲ್ಲರೂ ಅಮಾಯಕರು ಮತ್ತು ಬಡವರು ಎಂದು ಇಮ್ರಾನ್ ಪಾಷಾ ಹೇಳಿದ್ದಾರೆ.

ಅಲ್ಲದೆ ಬಂಧಿತರ ಕುಟುಂಬಸ್ಥರು ನಿತ್ಯವೂ ತಮ್ಮ ಮನೆ ಬಳಿ ಬಂದು ತಮ್ಮವರು ಅಮಾಯಕರು. ಸುಖಾಸುಮ್ಮನೆ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಆಲ್ಲದೆ ಈ ಕುರಿತು ನಾನು ಕೂಡ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಅಮಾಯಕರನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದೆ. ಇದೀಗ ಅವರಿಗೆ ಜಾಮೀನು ದೊರೆತಿದೆ ಎಂದು ಹೇಳಿದ್ದಾರೆ. 

ಕಳೆದ ಮೇ 30 ರಂದು ಕರ್ನಾಟಕ ಹೈಕೋರ್ಟ್ ಪ್ರಕರಣದ ಎಲ್ಲ 126 ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಅಲ್ಲದೆ ತಲಾ 1 ಲಕ್ಷ ರೂ ಭದ್ರತಾ ಠೇವಣಿ (ಶ್ಯೂರಿಟಿ) ಇಡುವಂತೆ ಸೂಚಿಸಿತ್ತು. 

SCROLL FOR NEXT