ಬಾವಿಯ ಚಿತ್ರ 
ರಾಜ್ಯ

ಚಿಕ್ಕೋಡಿ: ತಂದೆ, ಮಗನನ್ನು ಥಳಿಸಿ ಬಾವಿಗೆಸೆದ ಕಳ್ಳರು; ತಂದೆ ಸಾವು, ಮಗ ಗಂಭೀರ ಗಾಯ

ಆರು ಜನ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿ ಬಾವಿಗೆಸೆದ ಪರಿಣಾಮ ತಂದೆ ಸಾವನಪ್ಪಿದ್ದು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡದಲ್ಲಿ ನಡೆದಿದೆ. 

ಚಿಕ್ಕೋಡಿ: ಆರು ಜನ ಕಳ್ಳರು ಮನೆಯ ಮಾಲೀಕ ಹಾಗೂ ಆತನ ಮಗನನ್ನು ಹಿಗ್ಗಾಮುಗ್ಗಾ ಥಳಿಸಿ ಬಾವಿಗೆಸೆದ ಪರಿಣಾಮ ತಂದೆ ಸಾವನಪ್ಪಿದ್ದು ಮಗ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಬಾಗ ತಾಲೂಕಿನ ಬೆಂಡವಾಡದಲ್ಲಿ ನಡೆದಿದೆ. 

ಮೃತನನ್ನು ಬೆಂಡವಾಡ ಗ್ರಾಮದ ನಿವಾಸಿ ಮುಕುಂದ ಮೇತ್ರಿ(38) ಎಂದು ಗುರುತಿಸಲಾಗಿದೆ. ಇನ್ನೂ ಆತನ ಮಗ ರಾಘವೇಂದ್ರ ಮೇತ್ರಿ (23) ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಗೋಕಾಕ ಖಾಸಗಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಾಗಿಸಿದ್ದಾರೆ.

ಬೆಂಡವಾಡ ಗ್ರಾಮದ ತೋಟದ ಮನೆಗೆ ತಡರಾತ್ರಿ ಆರು ಜನರು ಕಳ್ಳರು ಕಳ್ಳತನಕ್ಕೆ ಯತ್ನಿಸಿದಾಗ ಮನೆಯ ಮಾಲೀಕ ಹಾಗೂ ಆತನ ಮಗ ಕಳ್ಳರನ್ನು ಹಿಡಿಯಲು ಬೆನ್ನತ್ತಿದ್ದಾರೆ. ಈ ಸಂದರ್ಭದಲ್ಲಿ  ಕಳ್ಳರು ತಂದೆ, ಮಗನನ್ನು ಥಳಿಸಿ ಅಲ್ಲಿಯೇ ರಸ್ತೆ ಪಕ್ಕದಲ್ಲಿದ್ದ ಬಾವಿಗೆ ಎಸೆದು ಓಡಿ ಹೋಗಿದ್ದರೆ. ಇನ್ನೂ ಹಲ್ಲೆಯಿಂದ ತಂದೆ ಸಾವನ್ನಪ್ಪಿದ್ದು ಮಗನನ್ನು ಗೋಕಾಕ ದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ‌ನೀಡಿ ಪರಿಶೀಲಿನೆ ನಡೆಸಿ ಕಳ್ಳರನ್ನು ಹಿಡಿಯಲು ಜಾಲ ಬೀಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

ಲೋಕಸಭಾ ಸ್ಥಾನಗಳ ಹೆಚ್ಚಳ ಪ್ರಸ್ತಾವನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ‘ದಿಕ್ಕು ತಪ್ಪಿಸುವ ಅಸ್ತ್ರ’; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

SCROLL FOR NEXT