ರಾಜ್ಯ

ಕೊರೋನಾ: ಸಾರಿ, ಐಎಲ್ಐ ಕೇಸ್ ಪತ್ತೆಗೆ ಸರ್ಕಾರದ ನೆರವಿಗೆ ಬಂದ ಫಾರ್ಮಸಿಗಳು!

Manjula VN

ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸಾರಿ, ಐಎಲ್ಐ ಪ್ರಕರಣಗಳನ್ನು ಪತ್ತೆ ಹಚ್ಚಲು ಔಷಾಧಾಲಯಗಳು ಸರ್ಕಾರದ ನೆರವಿಗೆ ಬಂದಿವೆ. 

70 ವರ್ಷ ರಮೇಶ್ (ಹೆಸರು ಬದಲಿಸಲಾಗಿದೆ) ಎಂಬುವವರು ಔಷಧಾಲಯವೊಂದರಲ್ಲಿ ಕೆಮ್ಮು ಹಾಗೂ ನೆಗಡಿಗೆ ಔಷಧಿಗಳನ್ನು ಪಡೆದುಕೊಂಡಿದ್ದು, ಈ ವೇಳೆ ಔಷಧಿ ನೀಡಿದ ಫಾರ್ಮಸಿಸ್ಟ್ ವ್ಯಕ್ತಿಯ ಹೆಸರು ಹಾಗೂ ವಿಳಾಸವನ್ನು ಪಡೆದುಕೊಂಡಿದ್ದಾರೆ. ವಾರಗಳ ಬಳಿಕ ಆರೋಗ್ಯಾಧಿಕಾರಿಗಳು ವ್ಯಕ್ತಿಗೆ ಕರೆ ಮಾಡಿದ್ದು, ಆರೋಗ್ಯ ವಿಚಾರಿಸಿದ್ದಾರೆ. 

ಔಷಧಾಲಯಗಳು ಇದೇ ರೀತಿ ಔಷಧಿ ಕೊಳ್ಳುವ ವ್ಯಕ್ತಿಯ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಿದ್ದು, ಈ ಮೂಲಕ ಸಾರಿ ಹಾಗೂ ಐಎಲ್ಐ ಪ್ರಕರಣಗಳ ಪತ್ತೆಗೆ ನೆರವಾಗುತ್ತಿದ್ದಾರೆ. 

ಕೆಮ್ಮು, ನೆಗಡಿ ಹಾಗೂ ಉಸಿರಾಟ ಸಮಸ್ಯೆ ಹೇಳಿಕೊಂಡು ಔಷಧಾಲಯಕ್ಕೆ ಬಂದು ಔಷದಿ ಖರೀದಿ ಮಾಡುವ ಜನರ ಮಾಹಿತಿ ಪಡೆದುಕೊಳ್ಳುವಂತೆ ಹಾಗೂ ಆ ಮಾಹಿತಿಯನ್ನು ಸರ್ಕಾರಕ್ಕೆ ನೀಡುವಂತೆ ಔಷಧಾಲಯಗಳಿಗೆ ಸೂಚನೆ ನೀಡಲಾಗಿದೆ. ಸಾಕಷ್ಟು ಜನರು ಸ್ವಯಂಪ್ರೇರಿತರಾಗಿ ಔಷಧಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಬಹುದು. ಪರಿಸ್ಥಿತಿ ಗಂಭೀರವಾದರೆ, ಯಾವುದೇ ಆಸ್ಪತ್ರೆ ಕೂಡ ಅವರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಡಾ.ಚಂದ್ರ ಅವರು ಹೇಳಿದ್ದಾರೆ. 

ವೆಬ್ ಅಪ್ಲಿಕೇಶನ್ ಮೂಲಕ ಔಷಧಾಲಯಗಳು ರೋಗಿಗಳ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಿದ್ದು, ಬಳಿಕ ಅಧಿಕಾರಿಗಳು ಮನೆ ಮನೆಗೆ ತೆರಳಿ ರೋಗಿಗಳ ಪರೀಕ್ಷೆ ನಡೆಸಲಿದ್ದಾರೆ. ಬಳಿಕ ರೋಗಿಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯ ಮಾಡಲಿದ್ದಾರೆ. ಈ ವರೆಗೂ 1,500 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಶೇ.30 ರಷ್ಟು ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಇನ್ನುಳಿದವರ ಪ್ರಕರಣಗಳು ಸಾರಿ ಹಾಗೂ ಐಎಲ್ಐ ಪ್ರಕರಣಗಳಾಗಿವೆ ೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

SCROLL FOR NEXT