ಚಕ್ರವರ್ತಿ ಸೂಲಿಬೆಲೆ 
ರಾಜ್ಯ

ಯುವಾ ಬ್ರಿಗೇಡ್ ನಿಂದ ಕರ್ನಾಟಕದ ಇತಿಹಾಸ, ಪರಂಪರೆಯನ್ನು ಜಗತ್ತಿಗೆ ತಿಳಿಸುವ ರೆಲ್ಲೋ ಪ್ಲೇಕ್ಸ್!

ಕರ್ನಾಟಕದ ಇತಿಹಾಸ, ಪರಂಪರೆ ಪ್ರವಾಸಿಗರಿಗೆ ಸುಲಭವಾಗಿ ತಲುಪಿಸಲು, ಹಲವು ಅಪರೂಪದ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದಕ್ಕಾಗಿ ಯುವಾ ಬ್ರಿಗೇಡ್ ರೆಲ್ಲೋ ಪ್ಲೇಕ್ಸ್ ​ ಅಭಿಯಾನವನ್ನು ಕೈಗೆತ್ತಿಕೊಂಡಿದೆ. 

ಬೆಂಗಳೂರು: ಕರ್ನಾಟಕದ ಇತಿಹಾಸ, ಪರಂಪರೆ ಪ್ರವಾಸಿಗರಿಗೆ ಸುಲಭವಾಗಿ ತಲುಪಿಸಲು, ಹಲವು ಅಪರೂಪದ ಸ್ಥಳಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದಕ್ಕಾಗಿ ಯುವಾ ಬ್ರಿಗೇಡ್ ರೆಲ್ಲೋ ಪ್ಲೇಕ್ಸ್ ಅಭಿಯಾನವನ್ನು ಕೈಗೆತ್ತಿಕೊಂಡಿದೆ. 

ಕಲ್ಯಾಣಿ ಸ್ವಚ್ಛತೆ, ಸ್ಟಾರ್ಟ್-ಅಪ್, ಉದ್ಯಮಿಗಳಾಗುವ ಯುವಕರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳಂತಹ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವಾ ಬ್ರಿಗೇಡ್ ತಂಡ ರೆಲ್ಲೋ ಪ್ಲೇಕ್ ಅಭಿಯಾನಕ್ಕಾಗಿ ಲಾಕ್ ಡೌನ್ ಅವಧಿಯನ್ನು ಸಮರ್ಥವಾಗಿ ಬಳಸಿಕೊಂಡಿದೆ. 

ರೆಲ್ಲೋ ಪ್ಲೇಕ್ ಬಗ್ಗೆ ಯುವಾಬ್ರಿಗೇಡ್ ನ ಮಾರ್ಗದರ್ಶಕರಾಗಿರುವ, ಅಂಕಣಕಾರ, ಲೇಖಕ ಚಕ್ರವರ್ತಿ ಸೂಲಿಬೆಲೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

"ಪ್ರಾಚೀನ ಪರಂಪರೆಯನ್ನು ಉಳಿಸಿ, ಹಳೆಯದನ್ನು ನೆನಪಿಸಿಕೊಳ್ಳುವುದಕ್ಕೆ, ವಿಶೇಷವಾದ ವ್ಯಕ್ತಿಗಳ ಭೇಟಿ, ಅವರು ಭೇಟಿ ನೀಡಿದ್ದ ಸ್ಥಳಗಳನ್ನು ಗುರುತಿಸಲು ಇಂಗ್ಲೆಂಡ್ ನಲ್ಲಿ ಬಳಕೆ ಮಾಡಲಾಗುವ ಬ್ಲೂ ಪ್ಲೇಕ್ (ನೀಲಿ ಫಲಕ) ರೆಲ್ಲೋ ಪ್ಲೇಕ್ಸ್ ಗೆ ಸ್ಪೂರ್ತಿ. ಕರ್ನಾಟಕದ ಬಾವುಟದ ಬಣ್ಣ ಅರಿಶಿನ ಹಾಗೂ ಕುಂಕುಮವನ್ನು ಪ್ರತಿನಿಧಿಸುವ ಕೆಂಪು ಹಾಗೂ ಹಳದಿಯ ಬಣ್ಣದ್ದಾಗಿದೆ. ಅದು ಕಾರಣ ರೆಡ್-ಯೆಲ್ಲೋ ಪ್ಲೇಕ್ಸ್ ನ್ನು ಚುಟುಕಾಗಿ ರೆಲ್ಲೋ ಪ್ಲೇಕ್ಸ್ ಎಂದು ಹೇಳಲಾಗಿದೆ. 

ಕೋವಿಡ್-19 ಲಾಕ್ ಡೌನ್ ನಂತರ ಅತಿ ಹೆಚ್ಚು ಹೊಡೆತ ಬೀಳುವ ಕ್ಷೇತ್ರಗಳೆಂದರೆ ಅದು ಪ್ರವಾಸೋದ್ಯಮ, ಅವುಗಳ ಜೊತೆಯಲ್ಲೇ ಹೊಟೇಲ್ ಉದ್ಯಮಗಳೂ ಸಹ ಹೊಡೆತ ಎದುರಿಸಲಿವೆ. ಇಂತಹ ಸಂದರ್ಭದಲ್ಲೇ ಯುವಾ ಬ್ರಿಗೇಡ್ ರೆಲ್ಲೋ ಪ್ಲೇಕ್ಸ್ ಮೂಲಕ ಹೊಸ ಪ್ರಯೋಗಕ್ಕೆ ನಿರ್ಧರಿಸಿದೆ. 

ಈ ಲಾಕ್ ಡೌನ್ ಅವಧಿಯಲ್ಲಿ ಯುವಾ ಬ್ರಿಗೇಡ್ ನ ಕಾರ್ಯಕರ್ತರು ರೆಲ್ಲೋ ಪ್ಲೇಕ್ಸ್ ಹಾಕಬಹುದಾದ 600 ಅಪರೂಪದ ಸ್ಥಳಗಳನ್ನು ಗುರುತಿಸಿ, ಗೂಗಲ್ ಮ್ಯಾಪ್ ಡೇಟಾದಿಂದ ಹಿಡಿದು ಇದಕ್ಕೆ ಬೇಕಾದ ಅಷ್ಟೂ ತಯಾರಿಗಳನ್ನು ನಡೆಸಿದ್ದಾರೆ. 

ಜೂ.08 ರಂದು ಯುವಾ ಬ್ರಿಗೇಡ್ ನ 6 ನೇ ವಾರ್ಷಿಕೋತ್ಸದ ಹಿನ್ನೆಲೆಯಲ್ಲಿ ರಾಜ್ಯದ 60 ಭಾಗಗಳಲ್ಲಿ ರೆಲ್ಲೋ ಪ್ಲೇಕ್ಸ್ ನ್ನು ಹಾಕಲು ಯುವಾ ಬ್ರಿಗೇಡ್ ನಿರ್ಧರಿಸಿದ್ದು, ಅದೇ ದಿನದಂದು ರೆಲ್ಲೋ ಪ್ಲೇಕ್ ವೆಬ್ ಸೈಟ್ ಗೂ ಚಾಲನೆ ನೀಡಲಾಗುತ್ತದೆ. ಪ್ಲೇಕ್ ಗಳನ್ನು ಹಾಕಲಾಗಿರುವ ಸ್ಥಳಗಳು ರೆಲ್ಲೋ ಪ್ಲೇಕ್ ವೆಬ್ ಸೈಟ್ ನಲ್ಲಿ ಪ್ರತಿಬಿಂಬಿಸುವಂತೆ ಮಾಡಲಾಗುತ್ತದೆ. 

ಕನ್ನಡ-ಇಂಗ್ಲೀಷ್ ಗಳಲ್ಲಿ ರೆಲ್ಲೋ ಪ್ಲೇಕ್ ವೆಬ್ ಸೈಟ್ ಲಭ್ಯವಿರಲಿದ್ದು, ಸಾರ್ವಜನಿಕರೂ ಸಹ ರೆಲ್ಲೋಪ್-ಪೇಕ್ ಹಾಕಬಹುದಾದ ಸ್ಥಳಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT