ಸಂಗ್ರಹ ಚಿತ್ರ 
ರಾಜ್ಯ

ಅಕ್ರಮ ಸಂಬಂಧದಿಂದ ಪತ್ನಿಗೆ ಕೊರೋನಾ ಬಂದಿದೆ: ಆಸ್ಪತ್ರೆಯಲ್ಲಿ ಹೆಂಡತಿ ಮೇಲೆ ಅಸಂಬದ್ಧವಾಗಿ ಎಗರಾಡಿದ ಪತಿ!

ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಹೀಗಾಗಿಯೇ ಆಕೆಗೆ ಕೊರೋನಾ ವೈರಸ್ ಬಂದಿದೆ ಎಂದು ಆಸ್ಪತ್ರೆಯಲ್ಲಿಯೇ ಎಲ್ಲರ ಎದುರು ಕಿರುಚಾಡಿದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ. 

ವಿಜಯಪುರ: ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಹೀಗಾಗಿಯೇ ಆಕೆಗೆ ಕೊರೋನಾ ವೈರಸ್ ಬಂದಿದೆ ಎಂದು ಆಸ್ಪತ್ರೆಯಲ್ಲಿಯೇ ಎಲ್ಲರ ಎದುರು ಕಿರುಚಾಡಿದ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ. 

ಕೊರೋನಾ ವೈರಸ್ ಸೋಂಕು ತಗಲಿದ್ದ ಮಹಿಳೆಯೊಬ್ಬರನ್ನು ಐಸೋಲೇಷನ್ ವಾರ್ಡ್'ಗೆ ಸ್ಥಳಾಂತರಿಸಲಾಗಿತ್ತು. ಇದೇ ಆಸ್ಪತ್ರೆಯಲ್ಲಿಯೇ ಆಕೆಯ ಪತಿ ಕೂಡ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಮಹಿಳೆ ಆಗಮಿಸುತ್ತಿದ್ದನ್ನು ನೋಡಿದ ಕೂಡಲೇ ಆಕೆಯನ್ನು ನೋಡಿ ಕೂಗಾಡಲು ಆರಂಭಿಸಿದ್ದಾರೆ. 

ಈಕೆ ನನ್ನ ಪತ್ನಿಯಾಗಿದ್ದು, ಅಕ್ರಮ ಸಂಬಂಧದಿಂದಾಗಿ ಆಕೆಗೆ ಕೊರೋನಾ ವೈರಸ್ ಬಂದಿದೆ. ಈಕೆಯಿಂದ ದೂರಾಗಿ 2 ವಾರಗಳು ಕಳೆದಿವೆ ಎಂದು ಕೂಗಾಡಲು ಆರಂಭಿಸಿದ್ದರು. ಬಳಿಕ ಹಿರಿಯ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಎಷ್ಟು ಸಮಾಧಾನ ಪಡಿಸಿದರು ವ್ಯಕ್ತಿ ಸಮಾಧಾನಗೊಂಡಿರಲಿಲ್ಲ. ಬಳಿಕ ವೈದ್ಯರು ಬಂದು ವೈರಸ್ ಯಾವ ರೀತಿ ಹರಡುತ್ತದೆ ಎಂಬುದನ್ನು ವಿವರಿಸಿದಾಗ, ತಪ್ಪನ್ನು ಒಪ್ಪಿಕೊಂಡು, ಮಹಿಳೆ ಬಳಿ ಕ್ಷಮೆಯಾಚಿಸಿದ್ದಾನೆ. 

ಇದರ ನಡುವಲ್ಲೇ ಪುತ್ರಿಯೊಂದಿಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ಮಹಿಳೆಯೊಬ್ಬರಿಗೆ ನೆರೆ ಮನೆಯವರು ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಆಗಾಗ ಮನೆಯ ಬಳಿ ಬರುತ್ತಿದ್ದ ನೆರೆಮನೆಯವರು ಮಹಿಳೆಯ ಹತ್ತಿ ತನ್ನ ತಾಯಿಗೆ ಕರೆ ಮಾಡದಂತೆ ತಿಳಿಸಿ, ದೂರವಾಣಿ ಸಂಭಾಷಣೆಯಿಂದಲೂ ಕೊರೋನಾ ಬಂದು ಬಿಡುತ್ತದೆ ಎಂದು ಹೇಳಿ ಹೋಗುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಅ.16ರ CJPಯ ಪ್ರತಿಭಟನೆಗೆ ತಡೆ ನೀಡಲು ಹೈಕೋರ್ಟ್ ನಕಾರ!

ಕಾಕ್ರೋಚ್ ಜನತಾ ಪಾರ್ಟಿ, ಕಾಂಗ್ರೆಸ್ ಎರಡೂ ಒಂದೇ; ಇಲ್ಲಿ ನಿಮ್ಮನ್ನು ಯಾರೂ ಬಂಧಿಸಲ್ಲ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ!

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!