ರಾಜ್ಯ

ಕಾಳಿ ನದಿ ದಡದಲ್ಲಿ ಅಡೆತಡೆಯಿಲ್ಲದ ಅಕ್ರಮ ಮರಳು ಗಣಿಗಾರಿಕೆ 

Nagaraja AB

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯಾಳ ಮತ್ತು ಜೊಯ್ಡಾ ತಾಲೂಕಿನಲ್ಲಿ ಕಾಳಿ ನದಿ ದಡದಲ್ಲಿ ಅಕ್ರಮ ಮರಳುಗಣಿಗಾರಿಕೆ ಯಾವುದೇ ಅಡೆತಡೆಯಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ.

ನಿಸರ್ಗ ಚಂಡಮಾರುತದ ಕಾರಣ ಜಿಲ್ಲೆಯಲ್ಲಿ ಮೂರು ದಿನ ಭಾರೀ ಮಳೆಯಾಗಿದ್ದು, ಕಾಳಿ ನದಿ ದಡ ಸೇರಿದಂತೆ ಹಲವಾರು ಹೊಳೆಯ ಹತ್ತಿರ ಮಣ್ಣಿನ ಸವೆತ ಉಂಟಾಗಿ ಹೆಚ್ಚಿನ ಪ್ರಮಾಣದ ಮರಳು ಸಂಗ್ರಹವಾಗಿದೆ. ಇದು ಅಕ್ರಮ ಮರಳುಗಣಿಗಾರಿಕೆ ಕಾರಣವಾಗಿದೆ. 

ಸರ್ಕಾರಿ ಅಧಿಕಾರಿಗಳ ಅರಿವಿನಲ್ಲಿಯೇ ಡಜನ್ ಗಟ್ಟಲೇ ಲಾರಿಗಳ ಮೂಲಕ ನೆರೆಯ ಜಿಲ್ಲೆಗಳಿಗೆ ಮರಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಆಗಾಗ್ಗೆ ದೂರು ನೀಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ, ಮರಳು ಗಣಿಗಾರಿಕೆ ನಡೆಸುವವರು ಯಾವುದೇ ಭಯವಿಲ್ಲದೆ ಹಾಡುಹಗಲೇ ಮರಳನ್ನು ಸಾಗಟ ಮಾಡುತ್ತಿದ್ದಾರೆ  ಎಂದು ಸ್ಥಳೀಯ ಹೋರಾಟಗಾರ್ತಿ ಯೋಗರಾಜ್ ಶಿವಾಜಿ ಮರಾಠೆ ಹೇಳಿದರು. 

ಒಂಬತ್ತು ಲಾರಿಗಳಲ್ಲಿ ಮರಳು ಸಾಗಿಸುವುದನ್ನು ಕಣ್ಣಾರೆ ನೋಡಿದ್ದೇನೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಕಾರವಾರ ಸಹಾಯಕ ಆಯುಕ್ತರೊಂದಿಗೆ ಮಾತನಾಡಿದ್ದು, ಆ ಮಾರ್ಗದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿರುವುದಾಗಿ ಅವರು  ತಿಳಿಸಿದರು. 

ಈ ಬಗ್ಗೆ ಸಹಾಯಕ ಆಯುಕ್ತರಾದ ಪ್ರಿಯಾಂಗ ಅವರನ್ನು ಸಂಪರ್ಕಿಸಿದರೆ , ಅಕ್ರಮ ಮರಳುಗಣಿಗಾರಿಕೆ ಸಂಬಂಧ ದೂರು ಸ್ವೀಕರಿಸಲಾಗಿದೆ. ಕಾರವಾರ, ಜೋಯಿಡಾ, ದಾಂಡೇಲಿ ಮತ್ತು ಹಳಿಯಾಳದಲ್ಲಿನ ಮರಳು ಗಣಿಗಾರಿಕೆ ತಡೆಗಾಗಿ ನಾಲ್ಕು ಕಾರ್ಯ ಪಡೆ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. 

ಕೋವಿಡ್ -19 ಕಾರಣ ಕಾರ್ಯಪಡೆ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಸಿಸಿಟಿವಿಯಲ್ಲಿ  ಕೆಲ ತಾಂತ್ರಿಕ ದೋಷಗಳಿವೆ. ಸಿಸಿಟಿವಿ ಸರಿಮಾಡಲು ಹಳಿಯಾಳ ತಹಸೀಲ್ದಾರ್ ಒಪ್ಪಿದ್ದಾರೆ.  ನಾವು ಮರಳು ಗಣಿಗಾರಿಕೆಗೆ ಅನುಮತಿ ನೀಡಿಲ್ಲ ಆದರೆ, ಅಂತಹವರು ಬೆಳಗಾವಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸಾಗಣೆ ಪರವಾನಗಿಯನ್ನು ಪಡೆದಿರಬಹುದು. ಆ ಪರವಾನಗಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಇಂತಹ ಯಾವುದೇ ರೀತಿಯ ಪರವಾನಗಿಯನ್ನು ನಾವು ನೀಡಿಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. 2019 ರ ಪ್ರವಾಹದ ಹಿನ್ನೆಲೆಯಲ್ಲಿ ಸವೆತದಿಂದಾಗಿ ಖಾಸಗಿ ಭೂಮಿಯಿಂದ ಠೇವಣಿ ಇಟ್ಟ ಮರಳನ್ನು ಹೊರತೆಗೆಯಲು 2019 ರ ಅಕ್ಟೋಬರ್ ಮತ್ತು 2020 ರ ಜೂನ್ ನಡುವೆ ಮರಳು ತೆಗೆಯಲು 17 ಜನರಿಗೆ ಸರ್ಕಾರದ ಆದೇಶ ಹೊರಡಿಸಲಾಗಿದೆ. ಈಲ ಪೈಕಿ ಒಂಬತ್ತು ಮಂದಿ ಆದೇಶವನ್ನು ಉಲ್ಲಂಘಿಸಿದ್ದು, ಜಿಲ್ಲೆಯ ಹೊರಗಡೆ ಅಕ್ರಮ ಮರಳುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಅನಾಮದೇಯ ಷರತ್ತುಗಳ ಕುರಿತಂತೆ ಅಧಿಕಾರಿಗಳು ಹೇಳಿದರು. 

SCROLL FOR NEXT