ಮೃತಪಟ್ಟಿರುವ ಹಸಿವಿನ ಚಿತ್ರ 
ರಾಜ್ಯ

ಚಿಕ್ಕಮಗಳೂರು: ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ಹಸುಗಳ ಹತ್ಯೆ

ಇತ್ತೀಚೆಗಷ್ಟೇ ದೇವರ ನಾಡು ಕೇರಳದಲ್ಲಿ ಅನಾನಸ್ ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತದ ನಡುವೆಯೇ ರಾಜ್ಯದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಕೊಂದಿರುವ ಅಮಾನವೀಯ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು: ಇತ್ತೀಚೆಗಷ್ಟೇ ದೇವರ ನಾಡು ಕೇರಳದಲ್ಲಿ ಅನಾನಸ್ ನಲ್ಲಿ ಸ್ಫೋಟಕ ಇಟ್ಟು ಗರ್ಭಿಣಿ ಆನೆಯೊಂದನ್ನು ಕೊಂದ ದುರಂತದ ನಡುವೆಯೇ ರಾಜ್ಯದ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ದನಗಳನ್ನು ಕೊಂದಿರುವ ಅಮಾನವೀಯ ಘಟನೆ ವರದಿಯಾಗಿದೆ. 

ಹಲಸಿನ ಹಣ್ಣಿಗೆ ವಿಷ ಬೆರಸಿ ಮೂರು ದನಗಳನ್ನು ಕೊಂದಿರುವ ಪ್ರಕರಣ ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ತೋಟಕ್ಕೆ ದನಗಳು ಬೇಕಾಬಿಟ್ಟಿ ನುಗ್ಗುತ್ತಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಲಸಿನ ಹಣ್ಣಿಗೆ ವಿಷ ಬೆರಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಪೂರಿತ ಹಲಸಿನ ಹಣ್ಣು ತಿಂದ ಸಾವನ್ನಪ್ಪಿದ ಮೂರು ಹಸುಗಳು ಕಿಟ್ಟೆಗೌಡ ಹಾಗೂ ಮಧು ಎಂಬುವವರಿಗೆ ಸೇರಿವೆ.

ಘಟನೆಗೆ ಸಂಬಂಧಿಸಿದಂತೆ‌ ಅಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT