ರಾಜ್ಯ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 85ಕ್ಕೆ ಏರಿಕೆ, ಜನರಲ್ಲಿ ಹೆಚ್ಚಿದ ಆತಂಕ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ ಕೊರೋನಾ ಸೋಂಕಿತ ಕಂಟೈನ್‌ಮೆಂಟ್ ವಲಯಗಳ ಸಂಖ್ಯೆ 85ಕ್ಕೇರಿದೆ. 

ಈ ನಡುವೆ, ಬುಧವಾರ ನಗರದಲ್ಲಿ 20ಕ್ಕೂ ಹೆಚ್ಚು ಜ್ವರದ ಲಕ್ಷಣಗಳಿರುವ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಇವರಿಗೆ ಯಾವುದೇ ಸೋಂಕಿತರ ಸಂಪರ್ಕವಿಲ್ಲದಿರುವುದು, ನಗರದಲ್ಲಿ ಸಮೂಹ ಹರಡುವಿಕೆಯ ಭೀತಿ ಮೂಡಿಸಿದೆ. 

ಬಿಬಿಎಂಪಿಯಲ್ಲಿ ಕಂಟೈನ್‌ಮೆಂಟ್ ಪ್ರದೇಶಗಳನ್ನು ಹೊಂದಿರುವ ವಾರ್ಡ್‌ಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಬುಧವಾರ ಎಂಟು ವಾರ್ಡ್‌ಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ.

ದಕ್ಷಿಣ ವಲಯದಲ್ಲಿ ಹಂಪಿನಗರ ಹಾಗೂ ವಿದ್ಯಾಪೀಠ ವಾರ್ಡ್‌ಗಳು, ಪಶ್ಚಿಮ ವಲಯದಲ್ಲಿ ರಾಜಮಹಲ್‌ ಗುಟ್ಟಹಳ್ಳಿ, ಶ್ರೀರಾಮಮಂದಿರ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್‌ ವಾರ್ಡ್‌ಗಳು, ಯಲಹಂಕ ವಲಯದಲ್ಲಿ ವಿದ್ಯಾರಣ್ಯಪುರ ಹಾಗೂ ದಾಸರಹಳ್ಳಿ ವಲಯದಲ್ಲಿ ಶೆಟ್ಟಿಹಳ್ಳಿ ವಾರ್ಡ್‌ಗಳಲ್ಲಿ ಕಂಟೈನ್‌ಮೆಂಟ್‌ ಪ್ರದೇಶಗಳೆಂದು ಗುರುತಿಸಲಾಗಿದೆ. 
ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 50,415 ಮಂದಿಯನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

SCROLL FOR NEXT