ಸಂಗ್ರಹ ಚಿತ್ರ 
ರಾಜ್ಯ

3 ತಿಂಗಳು ಕಳೆದರೂ 1,500 ಪೈಕಿ ರಾಜ್ಯಕ್ಕೆ ಬಂದಿದ್ದು 63 ವೆಂಟಿಲೇಟರ್ ಗಳು ಮಾತ್ರ!

ಕೊರೋನಾ ಎಂಬ ಮಹಾಮಾರಿ ವಿರುದ್ಧ ಪರಿಣಾಮಕಾರಿ ರೀತಿಯಲ್ಲಿ ಹೋರಾಡುವ ಸಲುವಾಗಿ ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆಯೇ 1,500 ವೆಂಟಿಲೇಟರ್ ಗಳಿಗೆ ಆರ್ಡರ್ ಮಾಡಿದ್ದರೂ ಕೇಂದ್ರ ಸರ್ಕಾರ ಮುನ್ನಡೆಸುತ್ತಿರುವ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಈ ವರೆಗೂ ಕೇವಲ 63 ವೆಂಟಿಲೇಟರ್ ಗಳನ್ನು ಮಾತ್ರ ರಾಜ್ಯಕ್ಕೆ ರವಾನಿಸಿದೆ. 

ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ವಿರುದ್ಧ ಪರಿಣಾಮಕಾರಿ ರೀತಿಯಲ್ಲಿ ಹೋರಾಡುವ ಸಲುವಾಗಿ ರಾಜ್ಯ ಸರ್ಕಾರ ಮೂರು ತಿಂಗಳ ಹಿಂದೆಯೇ 1,500 ವೆಂಟಿಲೇಟರ್ ಗಳಿಗೆ ಆರ್ಡರ್ ಮಾಡಿದ್ದರೂ ಕೇಂದ್ರ ಸರ್ಕಾರ ಮುನ್ನಡೆಸುತ್ತಿರುವ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಈ ವರೆಗೂ ಕೇವಲ 63 ವೆಂಟಿಲೇಟರ್ ಗಳನ್ನು ಮಾತ್ರ ರಾಜ್ಯಕ್ಕೆ ರವಾನಿಸಿದೆ. 

ರಾಜ್ಯ ಸರ್ಕಾರ 1,300 ವೆಂಟಿಲೇಟರ್ ಗಳು ಕೇಂದ್ರ ಸರ್ಕಾರ ನಡೆಸುತ್ತಿರುವ ಹುಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ನಿಂದ, 130 ಮೈಸೂರು ಮೂಲಕ ಕಂಪನಿಯಾಗಿರುವ ಸ್ಕ್ಯಾನ್'ರೇ ಟೆಕ್ನಾಲಜೀಸ್ ನಿಂದ ಹಾಗೂ 70 ಸ್ಥಳೀಯ ಉತ್ಪಾದಕರಿಂದ ಖರೀದಿಸಲು ನಿರ್ಧರಿಸಿದ್ದರು. ಇದರಂತೆ ಮೂರು ತಿಂಗಳ ಹಿಂದೆಯೇ ಹಿಂದೂಸ್ತಾನ ಲ್ಯಾಟೆಕ್ಸ್ ಲಿಮಿಟೆಡ್'ಗೆ 1,300 ವೆಂಟಿಲೇಟರ್ ಗಳನ್ನೂ ಪೂರೈಸುವಂತೆ ಮನವಿ ಕೂಡ ಮಾಡಿಕೊಂಡಿತ್ತು. ಆದರೆ, ಈ ವರೆಗೂ ರಾಜ್ಯಕ್ಕೆ 63 ವೆಂಟಿಲೇಟರ್ ಗಳು ಮಾತ್ರ ರವಾನಿಸಲಾಗಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಡ್ರಗ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಹೆಚ್ಚುವರಿ ನಿರ್ದೇಶಕಿ ಮಂಜು ಶ್ರೀಯವರು ಮಾತನಾಡಿ, ಕೇಂದ್ರ ಸರ್ಕಾರದ ಬಳಿ ಆರ್ಡರ್ ಮಾಡಿದ್ದ 1,300 ವೆಂಟಿಲೇಟರ್ ಗಳಲ್ಲಿ ಈ ವರೆಗೂ ರಾಜ್ಯಕ್ಕೆ ಯಾವೊಂದೂ ವೆಂಟಿಲೇಟರ್ ಗಳೂ ಬಂದಿಲ್ಲ. ಸ್ಕ್ಯಾನ್'ರೇ ಬಳಿ ಆರ್ಡರ್ ಮಾಡಲಾಗಿದ್ದ 130 ವೆಂಟಿಲೇಟರ್ ಗಳ ಪೈಕಿ 35, ಸ್ಥಳೀಯ ಕಂಪನಿಗಳಲ್ಲಿ ಆರ್ಡರ್ ಮಾಡಲಾಗಿದ್ದ 70 ಪೈಕಿ 28 ವೆಂಟಿಲೇಟರ್ ಗಳು ಬಂದಿವೆ ಎಂದು ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ಬಿಲ್ವೆಲ್ ಪಾಸಿಟಿವ್ ಏರ್'ವೇ ಪ್ರೆಶರ್ (ಬಿಐಪಿಎಪಿ) 200 ಯಂತ್ರಗಳನ್ನು ಫ್ರೆಂಚ್ ಕಂಪನಿಯಾದ ಸೆಫಾಮ್ ನಿಂದ ಆರ್ಡರ್ ಮಾಡಲಾಗಿತ್ತು. ಇದರಲ್ಲಿ ಈ ವರೆಗೂ 94 ಯಂತ್ರಗಳು ಪೂರೈಕೆಯಾಗಿವೆ. ಈ ಯಂತ್ರ ಕೂಡ ವೆಂಟಿಲೇಟರ್ ರೀತಿಯಲ್ಲಿಯೇ ಕೆಲಸ ಮಾಡಲಿದೆ. ಆದರೆ ವೆಂಟಿಲೇಟರ್ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಟ್ಯೂಬ್ ಗಳೂ ಕೂಡ ಇದರಲ್ಲಿ ಇರುವುದಿಲ್ಲ. ಯಂತ್ರದ ಸಾಧನವನ್ನು ವ್ಯಕ್ತಿಯ ಮೂಗು ಮತ್ತು ಬಾಯಿಯ ಮೇಲೆ ಇರಿಸಿ ಆಮ್ಲಜನಕವನ್ನು ಪಂಪ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಈ ಹಿಂದೆ ಕಳಪೆ ಮಟ್ಟದ ವೆಂಟಿಲೇಟರ್ ಗಳನ್ನು ಪೂರೈಕೆ ಮಾಡಲಾಗಿತ್ತು. ಹೀಗಾಗಿ 15 ವೆಂಟಿಲೇಟರ್ ಗಳನ್ನು ವಾಪಸ್ ಕಳುಹಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು, ಆರೋಗ್ಯ ಇಲಾಖೆ ಆರ್ಡರ್ ಮಾಡಿರುವ ಕುರಿತು ನನಗ ತಿಳಿದಿಲ್ಲ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ಆರ್ಡರ್ ಮಾಡಿದ್ದ ಶೇ. 80ರಷ್ಟು ವೆಂಟಿಲೇಟರ್ ಗಳು ಎಲ್ಲಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ತಲುಪಿವೆ. ಇಡೀ ವಿಶ್ವದಾದ್ಯಂತ ವೆಂಟಿಲೇಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಹೀಗಾಗಿ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಎಲ್ಲಾ ಆಸ್ಪತ್ರೆಗಳನ್ನು ಅಪ್ ಗ್ರೇಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಇನ್ನು ವಾಸ್ತವಿಕ ವಿಚಾರಕ್ಕೆ ಬಂದರೆ ರಾಜ್ಯದಲ್ಲಿ ಶೇ.5ರಷ್ಟು ವೆಂಟಿಲೇಟರ್ ಗಳನ್ನು ಕೂಡ ಕೊರೋನಾ ರೋಗಿಗಳಿಗೆ ಬಳಕೆಯಾಗುತ್ತಿದ್ದ. ಆದ್ದರಿಂದ ಸಮಸ್ಯೆಗಳು ಎದುರಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಆರೋಗ್ಯ ಸಚಿವ ಶ್ರೀರಾಮುಲು ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ಹಣದುಬ್ಬರ ಶೇ.5.2; ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್? ಆಹಾರ, ಇಂಧನ ಬೆಲೆ ಏರಿಕೆ!

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ