ರಾಜ್ಯ

ಕೊರೋನಾವೈರಸ್ ಲಾಕ್‌ಡೌನ್ ಬಳಿಕ ಮತ್ತೆ ಅಲರ್ಟ್ ಆದ ಎಸಿಬಿ: ಕೆಐಎಡಿಬಿ ಅಧಿಕಾರಿಯ ಮನೆ ಮೇಲೆ ದಾಳಿ

Raghavendra Adiga

ಮಂಗಳೂರು: ಕೊರೋನಾವೈರಸ್  ಲಾಕ್‌ಡೌನ್ ಅವಧಿ ಮುಗಿದ ನಂತರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಜೂನ್ 12ರ ಗುರುವಾರ ಮಂಗಳೂರು, ಮಂಡ್ಯ ಮತ್ತು ಬೆಂಗಳೂರು ಸೇರಿದಂತೆ ಏಕಕಾಲದಲ್ಲಿ ರಾಜ್ಯದ ಹಲವಾರು ತಾಣಗಳ ಮೇಲೆ ಎಸಿಬಿದಾಳಿ ನಡೆಸಿತು.  ಮಾಜಿ ವಿಶೇಷ ಭೂಸ್ವಾಧೀನ ಅಧಿಕಾರಿ ದಾಸೇಗೌಡ ಈ ಎಲ್ಲಾ ನಗರಗಳಲ್ಲಿ ಮನೆ, ಆಸ್ತಿ ಹೊಂದಿದ್ದಾರೆಂದು ವರದಿಯಾಗಿದ್ದು ದಾಸೇಗೌಡ . ಡಿಸೆಂಬರ್ 19ರಂದು ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ  ಎಸಿಬಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ದಾಳಿಯ ಸಮಯದಲ್ಲಿ, ತಂಡವು ಅಪಾರ ಪ್ರಮಾಣದ ದಾಖಲೆಗಳಿಲ್ಲದ ಆಸ್ತಿಗಳನ್ನು ಪತ್ತೆ ಮಾಡಿದೆ ಎನ್ನಲಾಗಿದ್ದು ಮಂಗಳೂರಿನ  ಫ್ಲ್ಯಾಟ್ ಸೇರಿದಂತೆ ಮೂರರಿಂದ ನಾಲ್ಕು ಮನೆಗಳನ್ನು ಅಧಿಕಾರಿ ಹೊಂದಿದ್ದಾರೆ ಎಂದು ವರದಿಯಾಗಿದೆ. . ಅವರು ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ 11 ಸೈಟ್ ಗಳನ್ನು ಹೊಂದಿದ್ದಾರೆ. ಇದಲ್ಲದೆ  ಚಿನ್ನದ ಆಭರಣಗಳ ಬೃಹತ್ ಸಂಗ್ರಹವೂ ಕಂಡುಬಂದಿದೆ.

ಅಧಿಕಾರಿಯ ಮೇಲೆ ಅಕ್ರಮವಾಗಿ ಆಸ್ತಿ ಸಂಗ್ರಹಿಸಿದ ಆರೋಪ ಹೊರಿಸಲಾಗಿದ್ದು ವರು ಲಂಚ ಸ್ವೀಕಾರ ಪ್ರಕರಣದಲ್ಲಿ ಅಮಾನತಿನಲ್ಲಿದ್ದಾರೆ. ಅವರನ್ನು ಬಂಧಿಸಿದ ನಂತರ ದಾಸೇಗೌಡ ಜಾಮೀನಿನ ಮೇಲೆ ಹೊರಬಂದಿದ್ದರು.

ಮಂಗಳೂರಿನ  ಎಸಿಬಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಮತ್ತು ಇನ್ಸ್‌ಪೆಕ್ಟರ್ ಯೋಗೀಶ್ ನಾಯಕ್ ದಾಳಿಯ  ನೇತೃತ್ವ ವಹಿಸಿದ್ದಾರೆ.

SCROLL FOR NEXT