ರಾಜ್ಯ

ಬೆಂಗಳೂರು: ಕಣ್ಣೀರು ಸಹ ಕೊರೊನಾ ತರಿಸಬಲ್ಲದು: ಬಿಎಂ‌ಸಿಆರ್‌ಐ ಮಹತ್ವದ ಸಂಶೋಧನೆ

Vishwanath S

ಬೆಂಗಳೂರು: ಕೊರೋನಾ ಸೋಂಕಿನ ವೈರಸ್‌ ಹರಡಲು  ಕಣ್ಣು, ಕಿವಿ, ಮೂಗು, ಬಾಯಿ ಜೀವಕೊಡುವ ಅಂಗಗಳು‌. ಪದೇಪದೇ ಇವುಗಳನ್ನು ಮುಟ್ಟುತ್ತಿರಬಾರದು ಎಂದೂ ಸಲಹೆ ವಿಶ್ವ ವ್ಯಾಪಿಯಾಗಿಯೇ ಇದೆ. 

ಆದರೆ ಈಗ  ಕಣ್ಣೀರಿನಿಂದಲೂ ಕೊರೊನಾ ಹರಡುತ್ತದೆ ಎಂದು ಬೆಂಗಳೂರು ಮೆಡಿಕಲ್ ಕಾಲೇಜ್ ಅಂಡ್ ರಿಸರ್ಚ್ ಇನ್ಸ್ಟಿಟ್ಯೂಟ್(ಬಿಎಂಸಿಆರ್‌ಐ) ಸಂಶೋಧನೆ ಹೇಳಿದೆ.

ಕಣ್ಣಿಗೆ ಕಾಂಟ್ಯಾಕ್ಟ್ ಲೆನ್ಸ್ ಬಳಸುವವರಲ್ಲಿ ಸೋಂಕು ಸುಲಭವಾಗಿ ಹರಡುತ್ತದೆ. ಕನ್ನಡಕ ಧರಿಸುವವರಲ್ಲಿ ಸೋಂಕು ಹರಡುವ ಪ್ರಮಾಣ ಕಡಿಮೆ ಎಂದು ಅಮೆರಿಕದ ತಜ್ಞರು ನಡೆಸಿದ್ದ ಸಂಶೋಧನೆಯಿಂದ ಬಹಿರಂಗಗೊಂಡಿತ್ತು. ಇದೀಗ ಕಣ್ಣೀರು ಸಹ ಸೋಂಕು ತರಬಹುದು ಎನ್ನುವುದನ್ನು ಬೆಂಗಳೂರು ತಜ್ಞ ವೈದ್ಯರು ಪತ್ತೆ ಮಾಡಿದ್ದಾರೆ.

SCROLL FOR NEXT