ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ್ 
ರಾಜ್ಯ

ಸಮುದಾಯ ಸೌಕರ್ಯ ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಮುಂದು: ಬಡ್ಡಿ ದರ ಕಡಿತ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಗರದಾದ್ಯಂತ ಇರುವ ಸಮುದಾಯ ಸೌಕರ್ಯ ನಿವೇಶನಗಳನ್ನು 30 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದುಕೊಂಡವರಿಗೆ ಮಾರಾಟ ಮಾಡಲಾಗುವುದು. ಭೋಗ್ಯಕ್ಕೆ ಅಷ್ಟು ವರ್ಷಗಳ ಕಾಲ ಇದ್ದವರು ತಮಗೆ ಬೇಕೆಂದರೆ ಅಂತಹ ನಿವೇಶನಗಳನ್ನು ಖರೀದಿಸಬಹುದು ಎಂದು ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ್ ತಿಳಿಸಿದ್ದಾರೆ.

ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲು ನಗರದಾದ್ಯಂತ ಇರುವ ಸಮುದಾಯ ಸೌಕರ್ಯ ನಿವೇಶನಗಳನ್ನು(ಸಿಎ ಸೈಟ್) 30 ವರ್ಷಗಳ ಕಾಲ ಭೋಗ್ಯಕ್ಕೆ ಪಡೆದುಕೊಂಡವರಿಗೆ ಮಾರಾಟ ಮಾಡಲಾಗುವುದು. ಭೋಗ್ಯಕ್ಕೆ ಅಷ್ಟು ವರ್ಷಗಳ ಕಾಲ ಇದ್ದವರು ತಮಗೆ ಬೇಕೆಂದರೆ ಅಂತಹ ನಿವೇಶನಗಳನ್ನು ಖರೀದಿಸಬಹುದು ಎಂದು ಬಿಡಿಎ ಆಯುಕ್ತ ಹೆಚ್ ಆರ್ ಮಹದೇವ್ ತಿಳಿಸಿದ್ದಾರೆ.

ಬಿಡಿಎ ಆಯುಕ್ತರಾಗಿ ಹುದ್ದೆ ವಹಿಸಿಕೊಂಡ ನಂತರ ನೀಡಿದ ಮೊದಲ ಸಂದರ್ಶನದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆಗೆ ಮಾತನಾಡಿದ ಅವರು, ಬೆಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಇಂತಹ 1,450 ನಿವೇಶನಗಳಿವೆ. ಇವುಗಳ ಮಾರಾಟದಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಬಹುದು. ಕೆಲವರು ಇವುಗಳನ್ನು ಖರೀದಿಸಲು ಒಲವು ತೋರಿದ್ದಾರೆ ಎಂದರು.

ಪ್ರಸ್ತುತ ಇಂತಹ ನಿವೇಶನಗಳಿಗೆ ಶೇಕಡಾ 18ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಅದನ್ನು ಖರೀದಿದಾರರಿಗೆ ಸಹಾಯವಾಗಲು ಶೇಕಡಾ 9ಕ್ಕೆ ಇಳಿಸಲಾಗುವುದು ಎಂದರು.

ನಾಗರಿಕ ಸೌಕರ್ಯ ನಿವೇಶನವು ಖಾಸಗಿ ಅಥವಾ ಸಾರ್ವಜನಿಕ ಬಳಕೆಗಾಗಿ ಸೌಲಭ್ಯಗಳ ಅಭಿವೃದ್ಧಿಗೆ ಕಡ್ಡಾಯವಾಗಿ ಮೀಸಲಿಟ್ಟಿರುವ ನಿವೇಶನಗಳಾಗಿವೆ. ನಿವೇಶನಗಳನ್ನು ವಿನ್ಯಾಸ ಮಾಡುವ ಸಂದರ್ಭದಲ್ಲಿ ಶೇಕಡಾ 10ರಷ್ಟನ್ನು ಮೂಲಭೂತ ಸೌಕರ್ಯಗಳಿಗೆ ಮೀಸಲಿಡಲಾಗುತ್ತದೆ. ಖಾಸಗಿ ನಿವೇಶನವಾದರೆ ಇದು ಶೇಕಡಾ 3 ರಿಂದ ಶೇಕಡಾ 5ರಷ್ಟಿರುತ್ತದೆ ಎಂದು ಹಿರಿಯ ಬಿಡಿಎ ಎಂಜಿನಿಯರ್ ಹೇಳಿದ್ದಾರೆ. ಅಂಚೆ ಕಚೇರಿಗಳು, ಸಮುದಾಯ ಸಭಾಂಗಣಗಳು, ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಸಮುದಾಯ ಸೌಲಭ್ಯ ನಿವೇಶನಗಳಡಿಯಲ್ಲಿ ಬರುತ್ತವೆ.

ಬಿಡಿಎಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಅವು ವಾಸ್ತವ ರೂಪಕ್ಕೆ ಬಂದಾಗ ಆ ಬಗ್ಗೆ ಮಾತನಾಡುತ್ತೇನೆ.ಬಿಡಿಎ ನಿವೇಶನಗಳನ್ನು ಡಿಜಿಟಲೀಕರಣಗೊಳಿಸುವುದು ಅವುಗಳಲ್ಲಿ ಮಹತ್ವದ ಹೆಜ್ಜೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರದಂತೆ ಬಿಡಿಎ ಸಹ ಆಸ್ತಿಗಳನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡುವ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT