ರಾಜ್ಯ

ಭೂ ಸುಧಾರಣೆ ಕಾಯ್ದೆ ಕುರಿತು ಚರ್ಚೆ ನಡೆಸಲು ಅಧಿವೇಶನ ನಡೆಸಿ: ಸಿದ್ದರಾಮಯ್ಯ

Manjula VN

ಮೈಸೂರು: ಭೂ ಸುಧಾರಣೆ ಕಾಯ್ದೆ ಕುರಿತು ಚರ್ಚೆ ನಡೆಸಲು ಅಧಿವೇಶನ ನಡೆಸುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಆಗ್ರಹಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸುಗ್ರೀವಾಜ್ಞೆ ಹೊರಡಿಸುವುದಕ್ಕೂ ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಸರ್ಕಾರ ಸರ್ಕಾರ ವಿರೋಧ ಪಕ್ಷಘಳು ಹಾಗೂ ಸಂಬಂಧಪಟ್ಟಂತಹ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಬೇಕು. ಕಾಯ್ದೆ ಕುರಿತು ನಮಗೆ ಸುದೀರ್ಘ ಚರ್ಚೆ ಬೇಕು ಎಂದು ಆಗ್ರಹಿಸಿದ್ದಾರೆ. 

ಇದೇ ವೇಳೆ ಭೂ ಸುಧಾರಣಾ ಕಾಯ್ದೆ ಜಾರಿಗೆ ತರಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರು ಪಟ್ಟ ಶ್ರಮವನ್ನು ನೆನೆದ ಅವರು, ಉನ್ನತ ಸ್ಥಾನದಲ್ಲಿರುವವರು ಸ್ವಂತ ಭೂಮಿ ಪಡೆಯುವಂತೆ ಮಾಡುತ್ತಿರುವುದು ದುರಾದೃಷ್ಟಕರ ವಿಚಾರ. ಕಾಯ್ದೆ ತಿದ್ದುಪಡಿಯಿಂದ ಪರವಾನಗಿ ಇಲ್ಲದವರೂ ಕೂಡ ರೈತರ ಉತ್ಪನ್ನಗಳನ್ನು ಖರೀದಿ ಮಾಡಲು ಅನುಮತಿ ನೀಡಿದಂತಾಗುತ್ತದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರ ರಾಜ್ಯದ ಮೇಲೆ ಒತ್ತಡ ಹೇರಿದೆ ಎಂದು ಆರೋಪಿಸಿದ್ದಾರೆ. 

ಕೇಂದ್ರ ಸರ್ಕಾರ ಹೇಳುವುದಕ್ಕೆ ಯಡಿಯೂರಪ್ಪ ಅವರು ತಲೆಯಾಡಿಸುತ್ತಿದ್ದಾರೆ. ಪ್ರಧಾನಿ ಎದುರು ಮಾತನಾಡಲು ಅವರಿಗೆ ಧಮ್ ಇಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ರೂ.5,049 ಕೋಟಿ ಬಿಡುಗಡೆ ಮಾಡದೆ ಇದ್ದರೂ ಈ ವರೆಗೂ ಕೇಳಿಲ್ಲ ಎಂದಿದ್ದಾರೆ. 

SCROLL FOR NEXT