ರಾಜ್ಯ

ಸಚಿವ ಸುಧಾಕರ್ ತಂದೆಗೂ ಕೊರೋನಾ? ಜ್ವರ, ಕೆಮ್ಮಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು

Raghavendra Adiga

ಬೆಂಗಳೂರು: ಕರ್ನಾಟಕದಲ್ಲಿ ಕೊರೋನಾ ಮಹಾಮಾರಿ ದಿನದಿನಕ್ಕೆ ಹೆಚ್ಚುತ್ತಿದು ಇದೀಗ ವೈದ್ಯಕೀಯ ಶಿಕ್ಷಣ ಸಚಿವರ ಮನೆಗೂ ಕೊರೋನಾ ಆತಂಕ ಆವರಿಸಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಜ್ವರ ಹಾಗೂ ಕೆಮ್ಮಿನ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ.

ಈ ಸಂಬಂಧ ಸಚಿವರು ಟ್ವೀಟ್ ಮಾಡಿದ್ದು "ಜ್ವರ, ಕೆಮ್ಮು ಸಮಸ್ಯೆ ಕಂಡುಬಂದ ಹಿನ್ನಲೆಯಲ್ಲಿ 82 ವರ್ಷದ ನನ್ನ ಪೂಜ್ಯ ತಂದೆಯವರು ಆಸ್ಪತ್ರೆಗೆ ದಾಖಲಾಗಿದ್ದು, ಕೋವಿಡ್ ಪರೀಕ್ಷೆಗೂ ಒಳಗಾಗಿದ್ದಾರೆ. ವರದಿಯ ಫಲಿತಾಂಶವನ್ನು ಕಾಯುತ್ತಿದ್ದೇವೆ. ಅವರು ಶೀಘ್ರ ಗುಣಮುಖರಾಗುವಂತೆ ನೀವೂ ಪ್ರಾರ್ಥಿಸಿ ಎಂದು ಕೋರಿಕೊಳ್ಳುತ್ತಿದ್ದೇನೆ. ನಿಮ್ಮ ಶುಭ ಹಾರೈಕೆಗಳಿರಲಿ." ಎಂದಿದ್ದಾರೆ.

ಇದಲ್ಲದೆ ಬೆಂಗಳೂರಿನ ಸದಾಶಿವ ನಗರದಲ್ಲಿರೋ ಸುಧಾಕರ್ ನಿವಾಸದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು ಇದೇ ಕಾರಣದಿಂದ ಇಂದು ಬೆಳಿಗ್ಗೆ ಬಿಎಸ್ ಯಡಿಯೂರಪ್ಪ ನಡೆಸಿದ್ದ ಸಭೆಗೆ ಸಚಿವರು ಗೈರಾಗಿದ್ದಾರೆ. 

ಈ ಹಿಂದೆಯೂ ಸೋಂಕಿತ ಕ್ಯಾಮರಾಮನ್ ಒಬ್ಬನ ಸಂಪರ್ಕಕ್ಕೆ ಬಂದು ಸೆಲ್ಫ್ ಕ್ವಾರಂಟೈನ್ ಗೆ ಒಳಗಾಗಿದ್ದ ಸಚಿವರ ಮನೆಗೆಲಸದ ವ್ಯಕ್ತಿಗೆ ಕೊರೋನಾ ಬಂದಿರುವುದು, ಅವರ ತಂದೆಗೆ ಜ್ವರ ಕಾಣಿಸಿಕೊಂಡಿರುವುದು ನಿಜಕ್ಕೂ ಆತಂಕ ಮೂಡಿಸಿದೆ. 

SCROLL FOR NEXT