ರಾಜ್ಯ

ಕೊರೋನಾ ವಿರುದ್ದ ಹೋರಾಟ: ವಿಕ್ಟೋರಿಯಾ ಆಸ್ಪತ್ರೆ ನರ್ಸ್ ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಗಳ ವಿತರಣೆ?

Manjula VN

ಬೆಂಗಳೂರು; ತಮ್ಮ ಜೀವವನ್ನೇ ಪಣಕ್ಕಿಟ್ಟು, ಮಹಾಮಾರಿ ವೈರಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಚಿಕಿತ್ಸೆ ನಡಿ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ವಿಕ್ಟೋರಿಯಾ ಆಸ್ಪತ್ರೆಯ ನರ್ಸ್ ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ವಿತರಸಲಾಗಿದೆ ಎಂದು ಹೇಳಲಾಗುತ್ತಿದೆ. 

ಆಸ್ಪತ್ರೆಯ ನಾಲ್ವರು ಸಿಬ್ಬಂದಿಯಲ್ಲೂ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ಸಿಬ್ಬಂದಿಗಳಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ನರ್ಸ್ ಗಳಿಗೆ ಕಳಪೆ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ವಿತರಿಸಿರುವುದು ಬೆಳಕಿಗೆ ಬಂದಿದೆ. 

ಈ ಬಗ್ಗೆ ನರ್ಸ್ ಗಳು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರ ಗಮನಕ್ಕೂ ತಂದಿದ್ದಾರೆಂದು ತಿಳಿದುಬಂದಿದೆ. ಈ ವರೆಗೂ ಆಸ್ಪತ್ರೆಯಲ್ಲಿ 13 ಮಂದಿಯಲ್ಲಿ ವೈರಸ್ ಕಾಣಿಸಿಕಂಡಿದೆ. ಇದರಲ್ಲಿ ವೈದ್ಯರು, ನರ್ಸ್ ಗಳು, ಗ್ರೂಪ್ ಡಿ ಹಾಗೂ ಲ್ಯಾಬ್ ಟೆಕ್ನಿಶಿಯನ್ಸ್ ಗಳೂ ಇದ್ದಾರೆಂದು ತಿಳಿದುಬಂದಿದೆ.
 
13 ಮಂದಿ ಪಾಸಿಟಿವ್ ಪ್ರಕರಣಗಳಲ್ಲಿ 4 ಮಂದಿ ನರ್ಸ್ ಗಳಿದ್ದಾರೆ. ನಾವು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದ್ದು, ನಮ್ಮ ಸುರಕ್ಷತೆಗಾಗಿ ಉತ್ತಮ ಗುಣಮಟ್ಟದ ಪಿಪಿಇ ಕಿಟ್ ಗಳನ್ನು ನೀಡಬೇಕು. ಒಂದು ಬಾರಿ ನೀಡಿದ್ದ ಪಿಪಿಇ ಕಿಟ್ ಗಳು ಈಗಾಗಲೇ ಹಾಳಾಗಿದೆ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಲ್ಲೂ ವೈರಸ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ನಾವು ನಮ್ಮ ದನಿಯನ್ನು ಎತ್ತಿದ್ದು, ಸಚಿವರೊಂದಿಗೂ ಮಾತುಕತೆ ನಡೆಸಿದ್ದೇವೆಂದು ನರ್ಸ್ ಒಬ್ಬರು ಹೇಳಿದ್ದಾರೆ.

ಆಸ್ಪತ್ರೆಯ ಆಡಳಿತ ಮಂಡಳಿ ನಾವು ಉತ್ತಮ ಗುಣಮಟ್ಟದ ಪಿಪಿಇ ಕಿಟ್ಸ್ ಗಳನ್ನು ನೀಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಸಾಕಷ್ಟು ಜನರು ಕಿಟ್ ಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅಂತಹ ಕಿಟ್ಸ್ ಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಬೇಕಿದೆ. ಆರಂಭದಲ್ಲಿ ನಮಗೆ ಉತ್ತಮ ಗುಣಮಟ್ಟದ ಪಿಪಿಇ ಕಿಟ್ಸ್ ಗಳನ್ನು ನೀಡಿದ್ದರು. ಆದರೆ, ಇದೀಗ ನೀಡುತ್ತಿಲ್ಲ. ಪಿಪಿಇ ಗಳ ಮೇಲೆ ಯಾವುದೇ ರೀತಿಯ ಗುಣಮಟ್ಟದ ಚಿನ್ಹೆಗಳಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಪಿಪಿಇ ಕಿಟ್ಸ್ ಗಳನ್ನು ನೀಡುವವರೆಗೂ ನಾವು ಕೆಲಸ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಸಚಿವರ ಭರವಸೆಗಳ ಬಳಿಕವಷ್ಟೇ ನಾವು ನಮ್ಮ ಕಾರ್ಯವನ್ನು ಮುಂದುವರೆಸುತ್ತೇವೆಂದು ಮತ್ತೊಬ್ಬ ನರ್ಸ್ ಹೇಳಿದ್ದಾರೆ. 

SCROLL FOR NEXT