ರಾಜ್ಯ

ಕೆಲಸ ಮಾಡಿದ ದಿನಗಳ ಸಂಭಾವನೆ ನೀಡಿ: ಪಿಯು ಮೌಲ್ಯಮಾಪಕರ ಒತ್ತಾಯ

Shilpa D

ಬೆಂಗಳೂರು: ನಾವು ಕೆಲಸ ಮಾಡಿದಷ್ಟು ದಿನಗಳ ಸಂಭಾವನೆಯನ್ನು ನಮಗೆ ನೀಡಿ ಎಂದು ಪಿಯು ಉಪನ್ಯಾಸಕರ ಸಂಘ ಗುರುವಾರ ಸರ್ಕಾರಕ್ಕೆ  ಬೇಡಿಕೆ ಇಟ್ಟಿದೆ.

ಕೊರೋನಾ ಹಿನ್ನೆಲೆಯಲ್ಲಿ  ಮೌಲ್ಯ ಮಾಪನ ಮಾಡುವ ಉಪನ್ಯಾಸಕರಿಗೆ ಸರ್ಕಾರ ಹಣ ನಿಗದಿ ಮಾಡಿತ್ತು. ಈ ಸಂಬಂಧ ಪದವಿಪೂರ್ವ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿರುವ ಪಿಯು ಉಪನ್ಯಾಸಕರ ಸಂಘ, ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲವು ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ.

ಹೀಗಾಗಿ ಕರ್ತವ್ಯಕ್ಕೆ ಹಾಜರಾಗದ ಉಪನ್ಯಾಸಕರಿಗೆ  ಅವರು ಎಷ್ಟು ದಿನ ಕೆಲಸ ಮಾಡಿದ್ದಾರೋ ಅಷ್ಟು ದಿನದ ಸಂಭಾವನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. 

ಸರ್ಕಾರವು ಈ ಪರಿಸ್ಥಿತಿಯನ್ನು "ಅಸಾಧಾರಣ" ಎಂದು ಪರಿಗಣಿಸಬೇಕು ಮತ್ತು ಎಲ್ಲಾ ಕೆಲಸದ ದಿನಗಳಿಗೂ ಸೂಕ್ತವಾದ ಸಂಭಾವನೆಯನ್ನು ಪಾವತಿಸಬೇಕು ಎಂದು ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷಾ ಕೊಠಡಿ ಉಸ್ತುವಾರಿ ಇನ್ವಿಜಿಲೇಟರ್‌ಗೆ ಪ್ರತಿ ಸೆಷನ್‌ಗೆ 108 ರೂ.ಗಳ ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ, ಆದರೆ ಎಸ್ ಎಸ್ ಎಲ್ ಸಿ ಪರೀಕ್ಷೆ ಮೇಲ್ವಿಚಾರಕರಿಗೆ ಒಂದು ಸೆಶನ್ ಗೆ 150 ರು ನಿಗದಿ ಪಡಿಸಲಾಗಿದೆ. ಸರ್ಕಾರ ದ್ವಿತೀಯ ಪಿಯುಸಿ ಮೇಲ್ವಿಚಾರಕರಿಗೆ ಪ್ರತಿ ಸೆಷನ್ ಗೆ 225 ರು ನಿಗದಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT