ಶಶಿಕಲಾ 
ರಾಜ್ಯ

ಶೀಘ್ರದಲ್ಲೇ ಶಶಿಕಲಾ ನಟರಾಜನ್ ಬಿಡುಗಡೆ ಹೇಳಿಕೆ: ಕಾರಾಗೃಹ ಇಲಾಖೆ ಸ್ಪಷ್ಟನೆ

ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ಅವರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಹೇಳಿಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದಾರೆ.

ಬೆಂಗಳೂರು: ಉಚ್ಚಾಟಿತ ಎಐಎಡಿಎಂಕೆ ಮುಖಂಡೆ ವಿ.ಕೆ.ಶಶಿಕಲಾ ಅವರನ್ನು ಯಾವುದೇ ಸಮಯದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎಂಬ ಹೇಳಿಕೆಯನ್ನು ಬೆಂಗಳೂರು ಕೇಂದ್ರ ಕಾರಾಗೃಹ ಅಧಿಕಾರಿಗಳು ನಿರಾಕರಿಸಿದ್ದಾರೆ.

ಮುಂದಿನ 30 ದಿನಗಳಲ್ಲಿ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿ ಸಿದ್ಧವಾಗಿದ್ದು ಅದರಲ್ಲಿ ಶಶಿಕಲಾ ಅವರ ಹೆಸರನ್ನು ಇನ್ನೂ ಪಟ್ಟಿಗೆ ಸೇರಿಸಿಲ್ಲ ಎಂದು ಜೈಲು ಇಲಾಖೆ ಮೂಲಗಳು ತಿಳಿಸಿವೆ.

ಅಪರಾಧಿಯನ್ನು ಬಿಡುಗಡೆ ಮಾಡುವಾಗ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅವರು ಬಿಡುಗಡೆಗೆ ಅರ್ಹರಾದ ದಿನಗಳು, ಹಿರಿಯ ಅಧಿಕಾರಿಗಳು ನೀಡಿದ ವಿಶೇಷ ರಜೆ ಮತ್ತು ಅವರು ಪೆರೋಲ್ ಪಡೆದ ದಿನಗಳ ಸಂಖ್ಯೆ, ಅವರನ್ನು ಬಿಡುಗಡೆ ಮಾಡುವಾಗ ಎಲ್ಲವನ್ನೂ  ಪರಿಗಣಿಸಲಾಗುತ್ತದೆ.

ಕರ್ನಾಟಕ ಕಾರಾಗೃಹ ಇಲಾಖೆಯ ನಿಯಮಾವಳಿಗಳ ಪ್ರಕಾರ, ಸನ್ನಡತೆಗಾಗಿ ತಿಂಗಳಲ್ಲಿ ಮೂರು ದಿನ, ಶಿಸ್ತು ಮತ್ತಿತರ ಕಾರಣಗಳಿಗಾಗಿ ಮೂರು ದಿನ ರಜೆ ನಿಗದಿ ಮಾಡಲಾಗಿರುತ್ತದೆ. ವಿಶೇಷಾಧಿಕಾರದಲ್ಲಿ ಸೂಪರಿಂಟೆಂಡ್ 30 ದಿನಗಳ ಪೆರೋಲ್ ಮಾಡಬಹುದಾಗಿದೆ. ಮತ್ತು ಐಜಿ 60 ದಿನ ಪೆರೋಲ್ ನೀಡಬಹುದಾಗಿದೆ.
 
ಈ ಎಲ್ಲಾ ಅಂಶಗಳನ್ನು ಅಪರಾಧಿಯನ್ನು ಬಿಡುಗಡೆ ಮಾಡುವ ವೇಳೆ ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.  ಹೀಗಾಗಿ ಆಗಸ್ಟ್ ನಲ್ಲಿ ಬಿಡುಗಡೆಯಾಗಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಶಿಕಲಾ ಮತ್ತಿಬ್ಬರ ಬಿಡುಗಡೆ ಸಂಬಂಧ ಇನ್ನೂ ನಿರ್ಧಾರವಾಗಿಲ್ಲ,ಮುಂದಿನ  30 ದಿನಗಳಲ್ಲಿ ಬಿಡುಗಡೆಯಾಗುವ ಪಟ್ಟಿಯಲ್ಲಿ ಶಶಿಕಲಾ ಹೆಸರಿಲ್ಲ ಎಂದು ಹೇಳಿದ್ದಾರೆ.

ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ2017ರ ಫೆಬ್ರವರಿಯಿಂದ ಜೈಲುವಾಸ ಅನುಭವಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್