ಮುರುಗೇಶ್ ನಿರಾಣಿ 
ರಾಜ್ಯ

ಆಗಸ್ಟ್ 1ರಿಂದ ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭ: ಮುರುಗೇಶ್ ನಿರಾಣಿ

ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮಾದರಿ ಕಾರ್ಖಾನೆಯಾಗಿಸಲು ಪ್ರಯತ್ನಿಸಲಾಗುವುದು. ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಿ ಶೀಘ್ರವೇ ಕಬ್ಬು ಅರೆಯಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ಮೈಸೂರು: ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮಾದರಿ ಕಾರ್ಖಾನೆಯಾಗಿಸಲು ಪ್ರಯತ್ನಿಸಲಾಗುವುದು. ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಿ ಶೀಘ್ರವೇ ಕಬ್ಬು ಅರೆಯಲಾಗುವುದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 1ರಿಂದ ಪಾಂಡವಪುರ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ತಾವು ಕೃಷಿ ಕುಟುಂಬದಿಂದ ಬಂದವನಾಗಿದ್ದು, ಉತ್ತರ ಕರ್ನಾಟಕ ರೈತರ ಬವಣೆ ನೀಗಿಸಲು ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದೇನೆ‌. ಪಿಎಸ್ಎಸ್‌ಕೆ ಕಾರ್ಖಾನೆಯನ್ನು ಮಾದರಿ ಕಾರ್ಖಾನೆಯಾಗಿ ರೂಪಿಸಲಾಗುವುದ. ನಾಲ್ವಡಿ ಕೃಷ್ಣರಾಜ ಒಡೆಯರ್ ತಮಗೆ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದರು.

ಮೊದಲು ತಾವು ಖಾರ್ಖಾನೆ ಆರಂಭಿಸಿದಾಗ ಮನೆಯವರು ಕಷ್ಟ ಎಂದರು. ಆದರೂ ಇಂಜಿನಿಯರ್ ಪದವಿ ಪಡೆದಿದ್ದ ತಾವು ದೈರ್ಯದಿಂದಲೇ ಕಾರ್ಖಾನೆ ಆರಂಭಿಸಿದೆ. ಈಗ ಉತ್ತಮವಾಗಿ ಫ್ಯಾಕ್ಟರಿ ನಡೆಯುತ್ತಿದೆ. ಇದು ರೈತರಿಗೆ ಸಹಕಾರಿಯಾಗಿದೆ. ರೈತ ಕುಟುಂಬದ ಹಿನ್ನೆಲೆ ಇರುವ ತಾವು ಮೈಸೂರು ಭಾಗದ ಕಾರ್ಖಾನೆ ಅಭಿವೃದ್ಧಿಗೂ ಶ್ರಮಿಸುತ್ತೇನೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಮೇಲ್ದರ್ಜೆಗೆರಿಸಿ ಕಬ್ಬು ಅರೆಯಲಾಗುವುದು. ನಿರಾಣಿ ಶುಗರ್ ಲಿಮಿಟೆಡ್ ಸಕ್ಕರೆ ಉತ್ಪಾದನೆಯೊಂದಿಗೆ ವಿದ್ಯುತ್, ಇಥನಾಲ್, ರೆಕ್ಟಿಪೈಡ್ ಸ್ಫಿರಿಟ್, ಸಿಒ2, ಸಿಎನ್ಜಿ, ಸ್ಯಾನಿಟೈಸರ್, ರಸಗೊಬ್ಬರ ಸೇರಿದಂತೆ ಎಕ್ಸ್ಟ್ರಾ ನ್ಯಾಚುರಲ್ ಅಲ್ಕೋಹಾಲ್ ಉತ್ಪನ್ನಗಳನ್ನು ಕೂಡ ಉತ್ಪಾದಿಸಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರಕ್ಕೆ ಮತ್ತೆ ಹಿನ್ನಡೆ: SSLC ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನೇ ನೀಡಿ; ಹೈಕೋರ್ಟ್ ಆದೇಶ

ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್

ಇರಾನ್ ಗೆ ಕ್ಷಿಪಣಿಗೆ ಬಳಸುವ ಕೆಮಿಕಲ್ಸ್ ರವಾನೆ ಬಯಲು: ಅಮೆರಿಕ ಕೆಂಗಣ್ಣಿಗೆ ಚೀನಾ ಗುರಿ!

IPL 2026: ಬಾಲಿವುಡ್ ನಟಿ ಪ್ರೀತಿಜಿಂಟಾ 'ಅಪ್ಪುಗೆ'ಯಿಂದ ಕುಣಿದು ಕುಪ್ಪಳಿಸಿದ ಅರ್ಶದೀಪ್ ಸಿಂಗ್! ಹೊಟ್ಟೆ ಉರಿದುಕೊಂಡ ಶಮಿ Video

ಅಮೆರಿಕದಲ್ಲಿ ಏನಾಗ್ತಿದೆ? Open AI CTO ಆಯ್ತು, ಇದೀಗ Apple CEO ರಾಜೀನಾಮೆ!

SCROLL FOR NEXT