ರಾಜ್ಯ

ಕಾಂಗ್ರೆಸ್ ತೆಕ್ಕೆಗೆ ಮೈಸೂರು ಎಪಿಎಂಸಿ: ತಳ್ಳು ಗಾಡಿ ವ್ಯಾಪಾರಿಗೆ ಒಲಿದ ಅಧ್ಯಕ್ಷ ಪಟ್ಟ!

Shilpa D

ಮೈಸೂರು: ಮೈಸೂರು ಎಪಿಎಂಸಿ ಅಧ್ಯಕ್ಷರಾಗಿ ತಳ್ಳುಗಾಡಿ ವ್ಯಾಪಾರಿ ಆಯ್ಕೆಯಾಗಿದ್ದು, ರೈತರ ಮತ್ತು ವ್ಯಾಪಾರಿಗಳ ಹಿತರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.

ಕುರುಬರಹಳ್ಳಿ ಮೂಲದ ಬೆಳ್ಳುಳ್ಳಿ ಬಸವರಾಜ ಚಾಮುಂಡಿ ಬೆಟ್ಟ ಪಕ್ಕದ ಹೊಸಹುಂಡಿಯಲ್ಲಿ ತಮ್ಮ ಜೀವನ ಆರಂಭಿಸಿದರು. ಅವರಿಗಿದ್ದ ಕೆಲವೇ ಆಯ್ಕೆಗಳಲ್ಲಿ ಅವರು  ತಳ್ಳುವ ಗಾಡಿಯಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಮಾರಾಟ ಮಾಡುವುದನ್ನು ಆರಿಸಿಕೊಂಡರು. ಪ್ರತಿದಿನ ಸುಮಾರು 20ರಿಂದ 25 ಕಿಮೀ ದೂರ ತಳ್ಳುಗಾಡಿಯಲ್ಲಿ ಕ್ರಮಿಸುತ್ತಿದ್ದರು.

ಯಳಹುಂಡಿ, ಉತ್ತನಹಳ್ಳಿ, ಕಡಕೊಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುಮಾರು 12 ವರ್ಷಗಳ ಕಾಲ ಸುಡು ಬಿಸಿಲಿನಲ್ಲಿ ವ್ಯಾಪಾರ ಮಾಡಿದ್ದಾರೆ.

ಬಡತನದಿಂದಾಗಿ ಎಸ್ ಎಸ್ ಎಲ್ ಸಿಗೆ ತಮ್ಮ ವಿದ್ಯಾಭ್ಯಾಸ ಮುಗಿಸಬೇಕಾಯಿತು. ಅದಾದ ನಂತರ ಎಪಿಎಂಸಿ ಯಾರ್ಡ್ ನಲ್ಲಿ ಬಸವರಾಜ್ ದಿನಗೂಲಿ ನೌಕರರಾಗಿ ಕೆಲಸಕ್ಕೆ ಸೇರಿಕೊಂಡರು.

ನಂತರ ಅವರು ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ನಿರ್ಧರಿಸಿದರು, 1999 ರಲ್ಲಿ ದಿನಕ್ಕೆ 250 ರೂ ಸಂಪಾದನೆ ಮಾಡುತ್ತಿದ್ದರು. ಬೆಳಗಿನ ಜಾವವೇ ಮಾರುಕಟ್ಟೆಗೆ ತೆರಳಿ, ತನ್ನ ಗಾಡಿಯನ್ನು ತುಂಬಿಸಿಕೊಂಡು ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಅದಾದ ನಂತರ ಅವರು ಪ್ರಯಾಣಿಕರ ಆಟೋರಿಕ್ಷಾ ಖರೀದಿಸಿದರು.

ವ್ಯಾಪಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಬಸವರಾಜ್ ಅವರನ್ನು ಬೆಳ್ಳುಳ್ಳಿ ಎಂದು ಕರೆಯಲಾಗುತ್ತಿತ್ತು. ನಾಲ್ಕು ವರ್ಷದ ಹಿಂದೆಯೇ ನಾನು ಪ್ರಚಾರ ಆರಂಭಿಸಿದೆ, ನಾನು ಇಲ್ಲಿನ ಜನರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೆ, ಹೀಗಾಗಿ ಅವರ ನಾಡಿಮಿಡಿತ ಚೆನ್ನಾಗಿ ತಿಳಿದಿತ್ತು. ಮಾರಾಟಗಾರನೊಬ್ಬನ ಕಷ್ಟಳ ಬಗ್ಗೆ ನನಗೆ ಅರಿವಿತ್ತು ಎಂದು ಹೇಳಿದ್ದಾರೆ.

ದೇವಲಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಜೊತೆ ಉತ್ತಮ ದರ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ಕೈಗೊಂಡಿದ್ದ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು.

ಪ್ರತಿಷ್ಠೆಯ ಕಣವಾಗಿದ್ದ ಚುನಾವಣೆಯಲ್ಲಿ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಬಸವರಾಜು ಹಾಗೂ ಜೆಡಿಎಸ್‌ ಬೆಂಬಲಿತ ಕೋಟೆಹುಂಡಿ ಮಹಾದೇವು ಸ್ಪರ್ಧಿಸಿದ್ದರು. ಇಬ್ಬರೂ ತಲಾ ಎಂಟು ಮತ ಪಡೆದಿದ್ದರಿಂದ ಫಲಿತಾಂಶ ಸಮಬಲವಾಯಿತು. ಸದಸ್ಯರ ಒಪ್ಪಿಗೆ ಮೇರೆಗೆ ಚುನಾವಣಾಧಿಕಾರಿಯೂ ಆದ ಮೈಸೂರು ತಾಲ್ಲೂಕು ತಹಶೀಲ್ದಾರ್‌ ರಕ್ಷಿತ್‌, ಲಾಟರಿ ಮೊರೆ ಹೋಗಲು ನಿರ್ಧರಿಸಿದರು. ಈ ಅಗ್ನಿಪರೀಕ್ಷೆಯಲ್ಲಿ ‌ಬಸವರಾಜು ಅದೃಷ್ಟ ಖುಲಾಯಿಸಿತು.

SCROLL FOR NEXT