ಸಾಂದರ್ಭಿಕ ಚಿತ್ರ 
ರಾಜ್ಯ

ಯಾದಗಿರಿ: ಪ್ರವಾಹದಿಂದ ಜಲಾವೃತವಾಗಿದ್ದ ಮನೆಯಿಂದ ಕುಟುಂಬದ ಎಂಟು ಮಂದಿ ರಕ್ಷಣೆ

ಶಹಾಪುರದ ಬಾಪುಗೌಡ ನಗರ ಸಮೀಪದ ಹೊಳೆಯಿಂದ ಉಂಟಾಗಿರುವ ಪ್ರವಾಹದ ನೀರಿನಿಂದ ಆವೃತವಾಗಿರುವ ಮನೆಯೊಂದರಿಂದ ಕುಟುಂಬದ ಎಂಟು ಸದಸ್ಯರನ್ನು ಭಾನುವಾರ ರಕ್ಷಿಸಲಾಗಿದೆ.

ಯಾದಗಿರಿ: ಶಹಾಪುರದ ಬಾಪುಗೌಡ ನಗರ ಸಮೀಪದ ಹೊಳೆಯಿಂದ ಉಂಟಾಗಿರುವ ಪ್ರವಾಹದ ನೀರಿನಿಂದ ಆವೃತವಾಗಿರುವ ಮನೆಯೊಂದರಿಂದ ಕುಟುಂಬದ ಎಂಟು ಸದಸ್ಯರನ್ನು ಭಾನುವಾರ ರಕ್ಷಿಸಲಾಗಿದೆ.

ಬಾಪುಗೌಡ ನಗರದಲ್ಲಿ ವಿದ್ಯುತ್ ವೈಫಲ್ಯದ ಬಗ್ಗೆ ದೂರುಗಳು ಬಂದ ನಂತರ ವಿದ್ಯುತ್ ಮಾರ್ಗಗಳನ್ನು ಪರೀಕ್ಷಿಸಲು ತಂಡದೊಂದಿಗೆ ಸಾಗಿದ್ದಾಗ ಮನೆಯೊಂದರಿಂದ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೂಗುತ್ತಿರುವುದು ತಮಗೆ ಕೇಳಿ ಬಂದಿದೆ ಎಂದು ಶಹಾಪುರ ಗೆಸ್ಕಾಮ್‍ ನ ವಿಭಾಗ ಅಧಿಕಾರಿ(ಉಸ್ತುವಾರಿ) ಇಕ್ಬಾಲ್ ಲೋಹಾರಿ ಸೋಮವಾರ ಹೇಳಿದ್ದಾರೆ.

ಕತ್ತಲೆಯಾಗಿದ್ದರಿಂದ ಮತ್ತು ಭಾರೀ ಮಳೆಯಿಂದಾಗಿ ತಮಗೆ ಕೂಗಾಟ ಮಾತ್ರ ಕೇಳುತ್ತಿತ್ತು. ಮನೆಯ ಸುತ್ತಲೂ ನೀರು ಸುತ್ತುವರಿದಿದ್ದರಿಂದ ಕೂಗಾಟ ಎಲ್ಲಿಂದ ಬರುತ್ತಿದೆ ಎಂದು ತಿಳಿಯುವುದಕ್ಕೆ ಕಷ್ಟವಾಯಿತು ಎಂದು ಅವರು ಹೇಳಿದ್ದಾರೆ.

ಮನೆಯಲ್ಲಿ ಸಿಕ್ಕಿಬಿದ್ದ ಎಂಟು ಜನರನ್ನು ಪತ್ತೆಹಚ್ಚಿದೆ. ತಕ್ಷಣವೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳನ್ನು ಎಚ್ಚರಿಸಿದೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸಿಕ್ಕಿಬಿದ್ದ ಎಲ್ಲ ಕುಟುಂಬ ಸದಸ್ಯರನ್ನು ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ರಕ್ಷಿಸಲ್ಪಟ್ಟ ಎಲ್ಲ ಸದಸ್ಯರು ಸದ್ಯ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಉಳಿದಿದ್ದಾರೆ.

ರಕ್ಷಿಸಲ್ಪಟ್ಟ ಎಲ್ಲರೂ ಸುರಕ್ಷಿತವಾಗಿದ್ದು ಆರೋಗ್ಯದಿಂದಿದ್ದಾರೆ. ಅವರಿಗೆ ವೈದ್ಯಕೀಯ ನೆರವು ಮತ್ತು ಆಹಾರವನ್ನು ನೀಡಲಾಗುತ್ತಿದೆ. ಪ್ರವಾಹ ಕಡಿಮೆಯಾಗುವವರೆಗೂ ಇವರೆಲ್ಲ ವಿದ್ಯಾರ್ಥಿನಿಲಯದಲ್ಲೇ ಉಳಿಯಲಿದ್ದಾರೆ ಎಂದು ಶಹಾಪುರ ತಹಶೀಲ್ದಾರ್ ಜಗನ್ನಾಥ ರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ: ಹಲವು ಮಿಲಿಟರಿ ನಾಯಕರ ಹತ್ಯೆ- ಡೊನಾಲ್ಡ್ ಟ್ರಂಪ್! Video

ಲೋಕಸಭಾ ಸ್ಥಾನಗಳ ಹೆಚ್ಚಳ ಪ್ರಸ್ತಾವನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ, ‘ದಿಕ್ಕು ತಪ್ಪಿಸುವ ಅಸ್ತ್ರ’; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಇದೇ ಮೊದಲು, ಶತ್ರು ರಾಷ್ಟ್ರದ ಪ್ರಾಂತ್ಯದಲ್ಲಿ ಇಬ್ಬರು US ಪೈಲಟ್‌ ರಕ್ಷಣೆ, ಡೊನಾಲ್ಡ್ ಟ್ರಂಪ್!

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಹಾವೇರಿ ವಿಶ್ವವಿದ್ಯಾಲಯ: ಗೌರವ ಡಾಕ್ಟರೇಟ್ ಸ್ವೀಕರಿಸಲು ಸಂಸದ ಬಸವರಾಜ ಬೊಮ್ಮಾಯಿ ನಕಾರ!

SCROLL FOR NEXT