ರಾಜ್ಯ

ಬೆಂಗಳೂರು: ಮಹಿಳೆ ಮುಖಕ್ಕೆ ಉಗಿದ ಕೊರೋನಾ ಸೋಂಕಿತ ಐಪಿಎಸ್ ಅಧಿಕಾರಿ ಪತ್ನಿ

Shilpa D

ಬೆಂಗಳೂರು: ಆಟ ಆಡುವಾಗ ಹೆಚ್ಚಿನ ಶಬ್ದ ಮಾಡದಂತೆ ಐಪಿಎಸ್ ಅಧಿಕಾರಿ ಮಗನಿಗೆ ಬುದ್ದಿ ಹೇಳುವಂತೆ ಮನವಿ ಮಾಡಿದ ಮಹಿಳೆ ಮುಖಕ್ಕೆ ಐಪಿಎಸ್ ಅಧಿಕಾರಿಯ ಕೊರೋನಾ ಸೋಂಕಿತ ಪತ್ನಿ ಉಗಿದಿದ್ದಾರೆ ಎಂದು ಆರೋಪಿಸಲಾಗಿದೆ.

ಐಪಿಎಸ್ ಅಧಿಕಾರಿ ಪತ್ನಿಗೆ ಕೊರೋನಾ ಸೋಂಕು ದೃಢವಾಗಿದ್ದು, ಆಕೆ ಮಹಿಳೆ ಮುಖಕ್ಕೆ ಉಗಿದಿದ್ದಾರೆ ಎಂದು ಹೇಳಲಾಗಿದೆ, ಬಹುಕೋಟಿ ರುಪಾಯಿ ವಂತನೆ ಹಗರಣದಲ್ಲಿ ಸಿಬಿಐ ಅವರ ವಿರುದ್ಧ ತನಿಖೆ ನಡೆಸುತ್ತಿದೆ.

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮಹಿಳೆಯ ಪ್ರಕಾರ, ಅಧಿಕಾರಿಯ ಕುಟುಂಬವು ನಮ್ಮ ಮನೆಯ 2 ಮಹಡಿ ಕೆಳಗೆ ಅಧಿಕಾರಿ ಕುಟುಂಬವಿದ್ದು, ಅವರ 8 ವರ್ಷದ ಬಾಲಕ ಆಟವಾಡುವಾಗ ಕಿರುಚುತ್ತಾನೆ. ನಾನು ಈ ಮೊದಲು ಹೆಚ್ಚಿನ ಶಬ್ದ ಮಾಡದೆ ಆಟವಾಡಿಕೊಳ್ಳುವಂತೆ ಅವರ ತಾಯಿ ಬಳಿ ಮನವಿ ಮಾಡಿದ್ದೆ.

ಅದಾದ ನಂತರ ನಮ್ಮ ಮನೆಗೆ ಬಂದ 8 ಪೊಲೀಸ್ ಅಧಿಕಾರಿಗಳು ನನ್ನ ಮೇಲೆ ಕಿರುಚಾಡಿ ಮಕ್ಕಳ ಮೇಲೆ ದೌರ್ಜನ್ಯ ಎಂದು ಆರೋಪಿಸಿದರು, ಜೊತೆಗೆ ನನ್ನ ಒಪ್ಪಿಗೆಯಿಲ್ಲದೇ ಎಲ್ಲವನ್ನು ರೆಕಾರ್ಡ್ ಮಾಡಿದ್ದರು ಎಂದು ಮಹಿಳೆ ಹೇಳಿದ್ದಾರೆ.

ಇದಾದ ನಂತರ ಇಂತಹ ತಂತ್ರಗಳನ್ನೆಲ್ಲಾ ಬಳಸಬೇಡಿ ಎಂದು ನಾನು ಅವರ ಮನೆಗೆ ಹೋಗಿ ಬುದ್ದಿ ಹೇಳಿದಾಗ ಐಪಿಎಸ್ ಅಧಿಕಾರಿ ಪತ್ನಿ ನನ್ನನ್ನು ನಿಂದಿಸಿ, ನನ್ನ ಮುಖದ ಮೇಲೆ ಉಗಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಏನು ತಮಾಷೆ, ಈ ಬಗ್ಗೆ ಯಾರೂ ಏನೂ ಮಾಡುವುದಿಲ್ಲ ಮತ್ತು ಅವರು ಪ್ರತಿ ಬಾರಿಯೂ ಈ ನಡವಳಿಕೆಯಿಂದ ದೂರ ಸರಿಯುತ್ತಾರೆ, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ, ನನ್ನ ಮುಖವನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದನ್ನು ಬಿಟ್ಟು ನಾನು  ಏನು ಮಾಡಬಹುದು ಎಂದು ಮಹಿಳೆ ಪ್ರಶ್ನಿಸಿದ್ದಾರೆ.
 

SCROLL FOR NEXT