ರಾಜ್ಯ

ಉಡಾನ್ ಯೋಜನೆ: ಮಾ.29 ರಿಂದ ಮಂಗಳೂರು-ಹುಬ್ಬಳ್ಳಿ ವಿಮಾನ ಸಂಚಾರ

Raghavendra Adiga

ಮಂಗಳೂರು: ಉಡಾನ್ ಯೋಜನೆಯಡಿ ಮಂಗಳೂರು- ಹುಬ್ಬಳ್ಳಿ ನಡುವೆ ನೇರ ವಿಮಾನ ಸಂಚಾರ ಇದೆ 29 ರಿಂದ ಪ್ರಾರಂಭವಾಗಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ .

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನ ನಂತರ ಬಂದರಿ ನಗರ ಎರಡನೇ ಅತ್ಯಂತ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ ಎಂದರು.

ರಾಜ್ಯದ ಇತರೆ ನಗರಗಳಾದ ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಮತ್ತು ಬೀದರ್ ಉಡಾನ್ ಯೋಜನೆಯ ನಕ್ಷೆಯಲ್ಲಿ ಸೇರಿವೆ ಎಂದು ಹೇಳಿದರು. 

ಉಡಾನ್ ಯೋಜನೆಯಡಿ ಮಂಗಳೂರಿನಿಂದ ಹುಬ್ಬಳ್ಳಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ನೇರ ವಿಮಾನ ಸೇವೆ ಒದಗಿಸಲಿದೆ. ಮಾ. 29ರಿಂದ ಈ ಸೇವೆ ಲಭ್ಯವಾಗಲಿದ್ದು ಇದಾಗಲೇ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ.

SCROLL FOR NEXT