ರಾಜ್ಯ

ಗಾಯಕಿ ಸುಶ್ಮಿತಾ ಆತ್ಮಹತ್ಯೆ:  ಪತಿ, ಸಂಬಂಧಿಗಳು ಸೇರಿ ಮೂವರು ಅರೆಸ್ಟ್

Raghavendra Adiga

ಬೆಂಗಳೂರು: ಗಾಯಕಿ ಸುಶ್ಮಿತಾ ಎಚ್‌ಎಸ್‌ಗೆ ಕಿರುಕುಳ ನೀಡಿ ಆಕೆ ಆತ್ಮಹತ್ಯೆ ಂಆಡಿಕೊಳ್ಳುವಂತೆ ಂಆಡಿದ  ಆರೋಪದ ಹಿನ್ನೆಲೆಯಲ್ಲಿ ಆಕೆಯ ಪತಿ ಶರತ್ ಕುಮಾರ್ ಹಾಗೂ  ಅವರ ಚಿಕ್ಕಮ್ಮ ಮತ್ತು ಸಹೋದರಿಯನ್ನು ಪೋಲೀಸರು ಬಂಧಿಸಿದ್ದಾರೆ. ಬೆಂಗಳೂರು ಅನ್ನಪೂರ್ಣೇಶ್ವರನಗರ ಪೋಲೀಸರು  12 ದಿನಗಳ ಶೋಧನಡೆಸಿ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಖಚಿತ ಸುಳಿವು ಆಧರಿಸಿ ಪೊಲೀಸರು ಅವರ ಸಂಬಂಧಿಕರನ್ನು ವಿಚಾರಣೆ ನಡೆಸಲಾಗಿ ಲಾವೆಲ್ಲೆ ರಸ್ತೆಯ ಕಾರ್ ಶೋ ರೂಂನಲ್ಲಿ ಮ್ಯಾನೇಜರ್ ಆಗಿದ್ದ ಕುಮಾರ್, ಅವರ ಚಿಕ್ಕಮ್ಮ ವೈದೇಹಿ ಮತ್ತು ಸಹೋದರಿ ಗೀತಾ ಅವರನ್ನು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ  ಇರಿಸಲಾಗಿದೆ ಎಂದು ತಿಳಿದಿದೆ. ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಫೆಬ್ರವರಿ 17 ರಂದು ಗಾಯಕಿ ಸುಷ್ಮಿತಾ, (26) ಮಾಳಗಾಳದಲ್ಲಿರುವ ತನ್ನ ತವರಿನಲ್ಲಿ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಮುನ್ನ ಆಕೆ ತನ್ನ ಪತಿ ಕುಮಾರ್ ಮತ್ತು ಅವರ ಕುಟುಂಬ ತನಗೆ ವರದಕ್ಷಿಣೆಗಾಗಿ ಪ್ರತಿದಿನ ಕಿರುಕುಳ ನೀಡುತ್ತಿದ್ದಾರೆ. ಎಂದು ವಿವರವಾದ ವಾಟ್ಸ್ ಅಪ್ ಸಂದೇಶವನ್ನು ಕಳಿಸಿದ್ದಳು. ಈ ಸಂದೇಶ ಆಧರಿಸಿ ಮೃತಳ ತಾಯಿ ಮೀನಾಕ್ಷಿ ಪ್ರಕರಣ ದಾಖಲಿಸಿದ್ದರು.ಗಂಡನ ಮನೆಯಲ್ಲಿ ಆಕೆಯನ್ನು ಹೊಡೆದು ಹೊರಗೆ ಹಾಕಲಾಗುತ್ತಿತ್ತು, ಆರೋಪಿಗಳು ಬಂಧಿಸಲ್ಪಟ್ಟ ತಮ್ಮ ಸಾಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆಯುವ ಮೊದಲು ಅವರು ಹಲವಾರು ಜಾಗಗಳನ್ನು ಬದಲಾಯಿಸಿದ್ದರು. . ಘಟನೆ ಬೆಳಕಿಗೆ ಬಂದಾಗಿನಿಂದ ಅವರಲ್ಲಿ  ಯಾರೊಬ್ಬರೂ ಮೊಬೈಲ್ ಬಳಸಿಲ್ಲ. ಮೊಬೈಲ್ ಟವರ್ ಗಳ ಮೂಲಕ  ಪೊಲೀಸರಿಗೆ ಆರೋಪಿಗಳ ಪತ್ತೆ ಸಾಧ್ಯವಾಗದಂತೆ ಅವರು ಎಲ್ಲಾ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ”ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

58 ಲಕ್ಷ ರೂಪಾಯಿಗಳನ್ನು ಪಾವತಿಸಿಕಗ್ಗಲಿಪುರದಲ್ಲಿ  ಫ್ಲ್ಯಾಟ್ ಖರೀದಿಸಿದ್ದೇನೆ ಮತ್ತು ಇಎಂಐ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಕುಮಾರ್ ತನ್ನ ಪತ್ನಿಗೆ ಹಣಕ್ಕಾಗಿ ಪೀಡಿಸಿದ್ದಾರೆ. "ಕುಮಾರ್ ಸುಶ್ಮಿತಾಳನ್ನು ಮಧ್ಯರಾತ್ರಿಯಲ್ಲಿ ಒಂದೆರಡು ಬಾರಿ ಮನೆಯಿಂದ ಹೊರಗೆ ಹಾಕಿದ್ದ. . ಅವಳು ತನ್ನ ಜೀವನ ಕೊನೆಗೊಳಿಸಲು ಬಯಸುವಳೆಂದು ಆತನೆಂದಿಗೂ ಭಾವಿಸಿರಲಿಲ್ಲ ಈ ಘಟನೆ ಬೆಳಕಿಗೆ ಬಂದಾಗ, ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ  ಕೆಲವು ಸ್ನೇಹಿತರನ್ನು ಸಹ ವಿಚಾರಣೆ ಮಾಡಲಾಗಿದೆ" ಪೊಲೀಸರು ತಿಳಿಸಿದ್ದಾರೆ.

SCROLL FOR NEXT