ಯುವತಿ ಕರೆದೊಯ್ದಿದ್ದ ಸ್ವಾಮಿಜಿ 
ರಾಜ್ಯ

ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಸ್ವಾಮೀಜಿ ಪೊಲೀಸರ ವಶಕ್ಕೆ

ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಸ್ವಾಮೀಜಿಯನ್ನು ಕಾರವಾರದಲ್ಲಿ ಬಂಧಿಸಲಾಗಿದೆ.

ಕಾರವಾರ: ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಸ್ವಾಮೀಜಿಯನ್ನು ಕಾರವಾರದಲ್ಲಿ ಬಂಧಿಸಲಾಗಿದೆ.

ಈ ಬಗ್ಗೆ ಸುದ್ದಿಮಾಧ್ಯಮವೊಂದು ವರದಿ ಮಾಡಿರುವಂತೆ ಕೋಲಾರ ಜಿಲ್ಲೆಯ ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಭಟ್ಕಳ ತಾಲೂಕಿನ ಮುರುಡೇಶ್ವರದ ಲಾಡ್ಜ್ ವೊಂದರಲ್ಲಿ ಯುವತಿ ಸಮೇತವಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಠಕ್ಕೆ ಪಾದ ಪೂಜೆಗೆ ಬರುತ್ತಿದ್ದ 20 ವರ್ಷದ ಸ್ಥಳೀಯ ಯುವತಿ ಜೊತೆ ಫೆಬ್ರವರಿ 27ರಂದು ಸ್ವಾಮೀಜಿ ನಾಪತ್ತೆಯಾಗಿದ್ದರು. ಈ ಸಂಬಂಧ ಯುವತಿ ಪೋಷಕರು ಯುವತಿಯ ಕಣ್ಮರೆ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪೊಲೀಸ್ ದೂರು ದಾಖಲಾಗುತ್ತಿದ್ದಂತೆಯೇ ಪ್ರತಿ ದಿನ ಜಾಗ ಬದಲಿಸುತ್ತಿದ್ದ ಈ ಜೋಡಿಗಾಗಿ ಕೋಲಾರ ಪೊಲೀಸರು ಹಲವು ಜಿಲ್ಲೆಗಳಲ್ಲಿ ಹುಡುಕಾಟ ನಡೆಸಿದ್ದರು. ಎರಡು ದಿನದಿಂದ ಮುರಡೇಶ್ವರದ ಖಾಸಗಿ ಲಾಡ್ಜ್ ನಲ್ಲಿ ಯುವತಿಯೊಂದಿಗೆ ಸ್ವಾಮೀಜಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಸ್ವಾಮೀಜಿಯ ಮೊಬೈಲ್ ಸಿಗ್ನಲ್ ಆಧರಿಸಿ ಕೋಲಾರ ಪೊಲೀಸರು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದನ್ನು ಆಧರಿಸಿ ಪೊಲೀಸರು ಸ್ವಾಮಿಜಿ ಮತ್ತುಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿ ಮತ್ತು ಯುವತಿಯನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ