ರಾಜ್ಯ

ಸಿಎಂ ಬಿಎಸ್ ವೈ  ಹೆಚ್ಚಿನದನ್ನು ಕೊಡಲು ಬಯಸಿದ್ದರು, ಆದರೆ ಆಗಿದ್ದು....

Shilpa D

ಬೆಂಗಳೂರು: ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಿನ ಬಜೆಟ್ ಆಗಿತ್ತು, ಮತ್ತು ಹೆಚ್ಚಿನದನ್ನು ಮಾಡಲು ಬಯಸಿದ್ದರು. ಯಡಿಯೂರಪ್ಪ ಅವರ ಪ್ರಯತ್ನ ಪ್ರತಿ ಫಲಿಸುತ್ತಿತ್ತು.

ಬಜೆಟ್ ವಿಭಾಗದ ಮುಖ್ಯಸ್ಥರೊಂದಿಗೆ ಸಿಎಂ ಯಡಿಯೂರಪ್ಪ ಇತರರಿಗಿಂತ ಭಿನ್ನವಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದಾರೆ. 

ಯಡಿಯೂರಪ್ಪ ಅವರು  ಎಲ್ಲಾ ಕ್ಷೇತ್ರಗಳಿಂದ ಮತ್ತು ಎಲ್ಲಾ ವರ್ಗದ ಜನರಿಂದ ಪ್ರತಿಕ್ರಿಯೆ ಪಡೆದು ಅವರ ಅಭಿಪ್ರಾಯ ಪಡೆದುಕೊಂಡಿದ್ದರು. ಜನವರಿ ಮಧ್ಯಭಾಗದಿಂದ ಸಭೆ ಮೇಲೆ ಸಭೆ ನಡೆಸಿದರು.
ಸಿಲ್ಕ್ ಬೋರ್ಡ್ ನಿಂದ ದೇವನಹಳ್ಳಿಗೆ ಸಂಪರ್ಕಿಸುವ ಫೆರಿಪೆರಿಲ್ ರಸ್ತೆ ಮತ್ತು ನಗರಕ್ಕಾಗಿ ಅನೇಕ ಯೋಜನೆಗಳಿಗಾಗಿ ಅವರು ಹಲವು ದೂರ ದೃಷ್ಟಿ ಹೊಂದಿದ್ದರು. ಆದರೆ ಹಣದ ಕೊರತೆಯಿಂದಾಗಿ ಅದನ್ನು ಸ್ಥಗಿತಗೊಳಿಸಿದ್ದಾರೆ. 

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಿಎಂ ಅಪಾರ ಕನಸು ಕಂಡಿದ್ದರು, ಉತ್ತರ ಕರ್ನಾಟಕದ ಭಾಗದ ರೈತರಿಗೆ ಉತ್ತಮ ಲಾಭ ನೀಡಬೇಕೆಂದು ಕೊಂಡಿದ್ದರು. ಏಕೆಂದರೆ ಚುನಾವಣಾ ಸಮಯದಲ್ಲಿ  ಉತ್ತರ ಕರ್ನಾಟಕದ ಜನತೆ ಹೆಚ್ಚಿನ ಸಹಾಯ ಮಾಡಿದ್ದಕ್ಕೆ ಧನ್ಯವಾದ ಅರ್ಪಿಸಲು ಬಯಸಿದ್ದರು. ಆದರೆ ಹಣದ ಕೊರತೆ ಇದಕ್ಕೆಲ್ಲಾ ತಡೆಯೊಡ್ಡಿದೆ.

ಸಿಎಂ ಯಡಿಯೂರಪ್ಪ ಮಠ ಮಾನ್ಯಗಳಿಗೆ ಹಾಗೂ ಧಾರ್ಮಿಕ ಸಂಸ್ಥೆಗಳಿಗೆ  ಅನುದಾನ ನೀಡುವ ಪರಿಪಾಠ ಬೆಳೆಸಿಕೊಂಡರು. 

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದರೇ ಹೆಚ್ಚಿನ ಅನುದಾನ ಹಾಗೂ ಸಹಾಯ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಬಗ್ಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆದರೆ ಮೂಲಗಳ ಪ್ರಕಾರ ಯಡಿಯೂರಪ್ಪ ಕೇಳಿದಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಿಲ್ಲ ಎಂದು ತಿಳಿದು ಬಂದಿದೆ.

SCROLL FOR NEXT