ರಾಜ್ಯ

ಸರ್ಕಾರದ ಇಲಾಖೆಗಳ ಅಭಿವೃದ್ಧಿ ಅಳೆಯುವ 'ಹಸಿರು ಸೂಚ್ಯಂಕ' ಕರ್ನಾಟಕದಲ್ಲಿ ಜಾರಿ 

ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಹಸಿರು ಸೂಚ್ಯಂಕವನ್ನು ಜಾರಿಗೆ ತಂದಿದೆ. 

ಬೆಂಗಳೂರು: ಹವಾಮಾನ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರ ಹಸಿರು ಸೂಚ್ಯಂಕವನ್ನು ಜಾರಿಗೆ ತಂದಿದೆ. 


ಅದನ್ನು ಸರ್ಕಾರದ ನಿರ್ದೇಶನ, ಮಾರ್ಗಸೂಚಿ ಮತ್ತು ನೀತಿಗಳ ಆಂತರಿಕ ಭಾಗವಾಗಿ ರೂಪಿಸಲಾಗುತ್ತದೆ. ದೇಶದಲ್ಲಿಯೇ ಇಂತಹ ಪರಿಕಲ್ಪನೆ ಆರಂಭಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಆರಂಭದಲ್ಲಿ ಪಶು ಸಂಗೋಪನೆ, ಅರಣ್ಯ, ಕೃಷಿ ಸೇರಿದಂತೆ 20 ಇಲಾಖೆಗಳನ್ನು ಈ ಹಸಿರು ಸೂಚ್ಯಂಕದಡಿಯಲ್ಲಿ ಸೇರಿಸಲಾಗುತ್ತದೆ.


ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿರುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ(ಇಎಂಪಿಆರ್ ಐ), ಬಹುತೇಕ ಸರ್ಕಾರದ ಯೋಜನೆಗಳಲ್ಲಿ ನಾವು ನೀತಿಯ ವಿಷಯಗಳನ್ನು ನೋಡುತ್ತೇವೆ. ಉದಾಹರಣೆಗೆ ಸಾರಿಗೆ ವಿಚಾರ ತೆಗೆದುಕೊಂಡರೆ ಸೂಚ್ಯಂಕ ಮೌಲ್ಯಮಾಪನಕ್ಕೆ ಪರಿಸಹ ಸ್ನೇಹಿ ಕ್ರಮಗಳನ್ನು ನೋಡಲಾಗುತ್ತದೆ. ಹೊರಸೂಸುವಿಕೆ ಕಡಿತ, ಜಿಹೆಚ್ ಸಿ ಹೊರಸೂಸುವಿಕೆ, ಶಕ್ತಿ ದಕ್ಷತೆಯ ಇಂಧನ ಮತ್ತು ಅರಣ್ಯೀಕರಣದಂತಹ ವಿಷಯಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಅದರ ಅಧಿಕಾರಿಗಳು ತಿಳಿಸಿದರು.


ಇಎಂಪಿಆರ್ ಐ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ಈ ಸೂಚ್ಯಂಕವನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ. ಕಡು ಹಸಿರು, ತಿಳಿ ಹಸಿರು, ಕೇಸರಿ ಮತ್ತು ಕೆಂಪು. ಸೊನ್ನೆಯಿಂದ 5ರವರೆಗೆ ಅಂಕ ಪಟ್ಟಿಯನ್ನು ತಯಾರಿಸಾಗುತ್ತಿದ್ದು, ಇದರಲ್ಲಿ ಸಿಗುವ ಅಂಕಗಳ ಆಧಾರದ ಮೇಲೆ ಇಲಾಖೆಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತದೆ.


ಈ ಸೂಚ್ಯಂಕದ ಪರಿಣಾಮಕಾರಿ ಜಾರಿಯ ಕೆಲಸದ ಉಸ್ತುವಾರಿಯನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಹಿಸಲಾಗಿದೆ. ಮಾರ್ಗಸೂಚಿ ಸರಿಯಾಗಿ ಜಾರಿಯಾಗುತ್ತಿದೆಯೇ ಎಂದು ನೋಡಲು ಪ್ರತ್ಯೇಕ ತಂಡವನ್ನು ಸಹ ರಚಿಸಲಾಗುತ್ತದೆ. ಸರ್ಕಾರದ ಪ್ರತಿ ಇಲಾಖೆ ಸಹ ಪ್ರತ್ಯೇಕ ಪರಿಸರ ವಿಭಾಗವನ್ನು ರಚಿಸಿ ಮಾರ್ಗಸೂಚಿಯನ್ನು ಮೌಲ್ಯಮಾಪನ ಮಾಡಬಹುದಾಗಿದೆ. ಸರ್ಕಾರದ ಪ್ರತಿ ಯೋಜನೆ ಪರಿಸರದ ಮೇಲೆ ಪರಿಣಾಮ ಬೀರುವುದರಿಂದ ಕರ್ನಾಟಕದಲ್ಲಿ ಈ ಹಸಿರು ಸೂಚ್ಯಂಕ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ