ರಾಜ್ಯ

ಮಾರ್ಚ್ ಅಂತ್ಯದೊಳಗೆ ಸಾಲಮನ್ನಾ ಸಂಬಂಧದ ಗೊಂದಲ‌ಕ್ಕೆ ತೆರೆ: ಎಸ್.ಟಿ.ಸೋ‌ಮಶೇಖರ್

Shilpa D

ಬೆಂಗಳೂರು: ಮಾರ್ಚ್ ಅಂತ್ಯಕ್ಕೆ ಸಾಲ‌ಮನ್ನಾ ಬಗ್ಗೆ ಇರುವ ಗೊಂದಲವನ್ನು ಸರಿಪಡಿಸುತ್ತೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಶಿವಾನಂದ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಇಲ್ಲ ಅನ್ನೋ ತಾಂತ್ರಿಕ ಕಾರಣಕ್ಕೆ ಸಾಲಮನ್ನಾ ಆಗುತ್ತಿಲ್ಲ. 

ಇದರಿಂದ ಬ್ಯಾಂಕ್ ಗಳಿಗೂ ಸಾಲಮನ್ನಾದ ಮೊತ್ತವನ್ನೂ ಪಾವತಿ ಮಾಡಿಲ್ಲ. ಇದರಿಂದ ಜಿಲ್ಲಾ ಸಹಕಾರ ಬ್ಯಾಂಕುಗಳು ನಷ್ಟ ಅನುಭವಿಸುತ್ತಿವೆ. ಇಂಥ ಸಮಸ್ಯೆಗಳು, ಗೊಂದಲಗಳನ್ನು ನಿವಾರಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಸಚಿವರು, ಇಂಥ ಪ್ರಕರಣಗಳ ಬಗ್ಗೆ ವಿಶೇಷ ಗಮನಹರಿಸ್ತೇವೆ. ಗೊಂದಲಗಳನ್ನು ಪರಿಹರಿಸಲು ಕ್ರಮ ತಗೋತೇವೆ. ಈ ಸಂಬಂಧ ಸಿಎಂ ಜತೆ ಚರ್ಚಿಸಿ ಮಾರ್ಚ್ ಒಳಗೆ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.

1,60,493 ರೈತರ ಅರ್ಜಿಗಳಲ್ಲಿ 41,867 ಅರ್ಜಿಗಳು ಅನರ್ಹಗೊಂಡಿವೆ. ಉಳಿದ 1,18,626 ರೈತರು ದಾಖಲೆಗಳನ್ನು ಸಲ್ಲಿಸಿದ ಬಳಿಕ ಸಾಲ ಮನ್ನಾ ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.

ಈ ಎಲ್ಲ ಸಮಸ್ಯೆಗಳನ್ನು ಇದೇ ತಿಂಗಳ 31 ರೊಳಗೆ ಬಗೆಹರಿಸಿ ಸಾಲ ಮನ್ನಾ ಸೌಲಭ್ಯ ಸಿಗುವಂತೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

‘ಸಾಲ ಮನ್ನಾ ಯೋಜನೆಯಲ್ಲಿ 18.32 ಲಕ್ಷ ರೈತರ ಪೈಕಿ ಈಗಾಗಲೇ 16.01 ಲಕ್ಷ ರೈತರಿಗೆ ಸಾಲ ಮನ್ನಾ ಮೊತ್ತ ವಿತರಿಸಲು ₹7,434 ಕೋಟಿ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 15.70 ಲಕ್ಷ ರೈತರಿಗೆ ₹7,275 ಕೋಟಿಯನ್ನು ನಿಫ್ಟ್‌ ಮೂಲಕ ಅವರ ಉಳಿತಾಯ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದರು.

‘ಡಿಸಿಸಿ ಬ್ಯಾಂಕ್‌ಗಳು ರೈತರ ಉಳಿತಾಯ ಖಾತೆಗಳ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವುದರಿಂದ ₹176 ಕೋಟಿ ಅಪೆಕ್ಸ್‌ ಬ್ಯಾಂಕಿಗೆ ತಪ್ಪಾಗಿ ನಿಫ್ಟ್‌ ಮೂಲಕ ಹೋಗಿದ್ದು, ಅದನ್ನು ಸರಿಪಡಿಸುವ ಕಾರ್ಯ ನಡೆದಿದೆ’ ಎಂದು ಸೋಮಶೇಖರ್‌ ಹೇಳಿದರು.

‘2,30,990 ರೈತರ ಪೈಕಿ 70,497 ರೈತರು ಅರ್ಹತೆ ಹೊಂದುವ ದಾಖಲಾತಿಗಳನ್ನು ಸಲ್ಲಿಸಿದ್ದು, ಸಾಲ ಮನ್ನಾ ನಿಗದಿಪಡಿಸಿ ಅನುದಾನ ಬಿಡುಗಡೆಗೆ ಕ್ರಮ ಜರುಗಿಸಲಾಗಿದೆ’ ಎಂದರು.

SCROLL FOR NEXT