ರಾಜ್ಯ

ಮೈಸೂರು: ತಾಯಿ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಬಿಜೆಪಿ ಮುಖಂಡನ ಹತ್ಯೆ, ಆರೋಪಿಯಿಂದ ಸ್ಫೋಟಕ ಮಾಹಿತಿ

Vishwanath S

ಮೈಸೂರು: ತಾಯಿ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಬಿಜೆಪ ಮುಖಂಡ ಆನಂದ್ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಶರಣಾಗಿರುವ ಆರೋಪಿ ಬಸವರಾಜ್ ಹೇಳಿಕೆ ನೀಡಿದ್ದಾನೆ.

ಆನಂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸಂಜೆ ಆರೋಪಿ  ಬಸವರಾಜ್ ಪೊಲೀಸರಿಗೆ ಶರಣಾಗಿದ್ದ.

ಪ್ರಕರಣ ಸಂಬಂಧ ಬಸವರಾಜ್ ವಿರುದ್ಧ ಆನಂದ್ ಪತ್ನಿ ಪವಿತ್ರಾ ಅವರು ಪ್ರಕರಣ ದಾಖಲಿಸಿದ್ದರು. ಇದನ್ನು ತಿಳಿಯುತ್ತಲೇ ವಕೀಲರ ಮೂಲಕ ಬಸವರಾಜು ಪೊಲೀಸರಿಗೆ ಶರಣಾಗಿದ್ದಾನೆ.

ಮೈಸೂರು ಕುವೆಂಪುನಗರದ ಅಪಾರ್ಟ್​​ಮೆಂಟ್​​ವೊಂದರಲ್ಲಿ ದುಷ್ಕರ್ಮಿಗಳು ಬಿಜೆಪಿ ನಾಯಕ ಎಸ್​. ಆನಂದ್​ ಅವರನ್ನು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.

ಬಿಜೆಪಿಯ ಮೈಸೂರು ನಗರ ಸ್ಲಂ ಮೋರ್ಚಾ ಉಪಾಧ್ಯಕ್ಷರಾಗಿದ್ದ ಆನಂದ್ ಗುರುವಾರ ತಮ್ಮ ಬರ್ತಡೇ ಆಚರಣೆಯಲ್ಲಿದ್ದರು. ಕುವೆಂಪುನಗರ ಲವಕುಶ ಪಾರ್ಕ್ ಸಮೀಪದ ಅಪಾರ್ಟ್‍ಮೆಂಟ್‍ನಲ್ಲಿ ಪಾರ್ಟಿ ನಡೆಯುತ್ತಿದ್ದಾಗಲೇ ಕೊಲೆ ನಡೆದಿತ್ತು.

SCROLL FOR NEXT