ರಾಜ್ಯ

ಅಪಘಾತ: ರಸ್ತೆ ಮಧ್ಯೆಯೇ ಕೈ ಕೈ ಮಿಲಾಯಿಸಿದ ವಿದ್ಯಾರ್ಥಿಗಳು, ಸಂಚಾರ ದಟ್ಟಣೆಗೆ ಹೈರಾಣಾದ ಸವಾರರು

Manjula VN

ಬೆಂಗಳೂರು: ಕಾರು ಅಪಘಾತ ವಿಚಾರವಾಗಿ ಪಂಚತಾರಾ ಹೋಟೆಲ್ ನಲ್ಲಿ ಹೋಳಿ ಹಬ್ಬದ ಸಂಭ್ರಮ ಮುಗಿಸಿ ತೆರಳುತ್ತಿದ್ದ ವಿದ್ಯಾರ್ಥಿಗಳು ರಸ್ತೆ ಮಧ್ಯೆಯೇ ಕೈ ಕೈಮಿಲಾಯಿಸಿದ ಪರಿಣಾಮ, ಸ್ಥಳದಲ್ಲಿ ಸಂಚಾರ ದಟ್ಟಣೆ ಎದುರಾದ ಘಟನೆ ರೇಸ್ ಕೋರ್ಟ್ ರಸ್ತೆಯಲ್ಲಿ ನಡೆದಿದೆ. 

ರಾಜಾಜಿನಗರದ ಆಕಾಶಅ ಹಾಗೂ ಬಿಟಿಎಂ ಲೇಔಟ್'ನ ರಾಹುಲ್ ಎಂಬುವರೇ ಬಡಿದಾಟಕ್ಕಿಳಿದ ವಿದ್ಯಾರ್ಥಿಗಲಾಗಿದ್ದಾರೆ. ಘಟನೆ ಬಳಿಕ ಪೊಲೀಸು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಹೋಟೆಲ್ ನಲ್ಲಿ ಹೋಳಿ ಸಂಭ್ರಮಾಚರಣೆ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿದೆ. 

ಆಕಾಶ್ ಹಾಗೂ ರಾಹುಲ್ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ. ತಮ್ಮ ಸ್ನೇಹಿತರ ಜೊತೆ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಡೆದ ಹೋಳಿ ಸಡಗರದಲ್ಲಿ ಅವರು ಪಾಲ್ಗೊಂಡಿದ್ದರು. ಸಂಜೆ ಸಂಭ್ರಮಾಚರಣೆ ಮುಗಿಸಿ ಕಾರಿನಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳು ತೆರಳುತ್ತಿದ್ದರು. ಆಗ ರಾಹುಲ್, ಹಿಂದಿನಿಂದ ಆಕಾಶ್ ಕಾರಿಗೆ ಕಾರು ಗುದ್ದಿಸಿದ್ದಾನೆ. ಆಗ ಆಕ್ಶ್ ಕಾರು ಜಖಂಗೊಂಡಿದೆ. ಇದರಿಂದ ಕೆರಳಿದ ಆತ, ಕಾರಿನಿಂದ ಇಳಿದು ಬಂದು ರಾಹುಲ್ ಜೊತೆಗೆ ಜಗಳ ಶುರು ಮಾಡಿದ್ದಾನೆ.

ಈ ಹಂತದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕೊನೆಗೆ ಕೈ ಕೈ ಮಿಲಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಸಮೀಪದಲ್ಲಿದ್ದ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು, ಕೂಡಲೇ ಆಗಮಿಸಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಜೀಪಿನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಅಜಾಗರೂಕತೆ ವಾಹನ ಚಾಲನೆ ಆರೋಪದಡಿ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ಧಗಳ ನಿಂದಿಸಿ ಗಲಾಟೆ ಮಾಡಿದ ಆರೋಪದ ಮೇಲೆಗೆ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. 

SCROLL FOR NEXT