ರಾಜ್ಯ

ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರ

Nagaraja AB

ಬೆಂಗಳೂರು: ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ  ದೊರೆಯಿತು

ವಿಧಾನಸಭೆಯಲ್ಲಿ ವಿಧೇಯಕದ ಬಗ್ಗೆ ಬೆಳಕು ಚೆಲ್ಲಿದ ಕಂದಾಯ ಸಚಿವ ಆರ್.ಅಶೋಕ್, ಏಳು ವರ್ಷಗಳ ಬಳಿಕ ಕೈಗಾರಿಕೋದ್ಯಮಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೆ ತಾವು ಖರೀಸಿದ ಭೂಮಿಯನ್ನು ಮಾರಾಟ ಮಾಡಲು ಉದ್ದೇಶಿದರೆ, ಅದೇ ಉದ್ದೇಶಕ್ಕೆ ಇತರ ಕೈಗಾರಿಕೋದ್ಯಮಿಗೆ ಮಾರಾಟ ಮಾಡುವ ತಿದ್ದುಪಡಿ ವಿಧೇಯಕ ಇದಾಗಿದೆ.

 ಕೈಗಾರಿಕೆಗಳು ಏಳು ವರ್ಷವಾದ ಮೇಲೆ ಅವರಿಗೆ  ನಷ್ಟವಾದರೆ, ಆಗ ಅಲ್ಲಿನ ನೌಕರರು ಅತಂತ್ರರಾಗಿರುತ್ತಾರೆ. ಹೀಗಾಗಿ ಯಾವ ಉದ್ದೇಶಕ್ಕೆ ಭೂಮಿಯನ್ನು ಬಳಸಿದ್ದಾರೆ. ಅದನ್ನು ಅದೇ ಉದ್ದೇಶಕ್ಕೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯಕ್ಕೆ ಬರುವ ಕೈಗಾರಿಕೋದ್ಯಮಿಗಳಿಗೆ ತೊಂದರೆ‌ ಆಗದಂತೆ ಅದನ್ನು  ಸರಳೀಕರಣಗೊಳಿದ್ದೇವೆ. ರಾಜ್ಯಕ್ಕೆ ಆಗಮಿಸುವ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಕಾಯ್ದೆಯನ್ನು ತರಲಾಗಿದೆ ಎಂದು ವಿವರಿಸಿದರು.

SCROLL FOR NEXT