ರಾಜ್ಯ

ಬಿರು ಬಿಸಿಲಿನಿಂದ ಬಳಲುತ್ತಿದ್ದ ನಗರದಲ್ಲಿ ತಂಪೆರೆದ ಮಳೆ

Manjula VN

ಬೆಂಗಳೂರು: ಬಿರು ಬಿಸಿನಿಂದ ಬಳಲುತ್ತಿದ್ದ ನಗರದಲ್ಲಿ ಶುಕ್ರವಾರ ಸಂಜೆ ಕೆಲ ಕಾಲ ಸುರಿದ ಮಳೆಯಿಂದಾಗಿ ಸ್ವಲ್ಪ ಕಾಲ ತಂಪೆನಿಸಿಸಿದರೂ ರಾತ್ರಿ ಹೊತ್ತಿಗೆ ಧಗೆ ಹೆಚ್ಚಾಗಿತ್ತು. 

ಶುಗ್ರವಾಹ ಬೆಳಿಗ್ಗೆಯಿಂದ ಮಧ್ಯಾಹ್ನ 3.30ರವರೆಗೆ ಬಿಸಿಲಿನ ಪ್ರಮಾಣ ಬೋರಾಗಿಯೇ ಇತ್ತು. ಆದರೆ, ಏಕಾಏಕಿ ಮೋಡ ಕವಿದು ಮಳೆ ಸುರಿಯಲು ಆರಂಭವಾಯಿತು. ಒಮ್ಮೆಲೇ ಗುಡುಗು, ಮಿಂಚು ಸಿಡಿಲಿನ ಆರ್ಭಟ ಹೆಚ್ಚಾಗಿ 4.40ರ ಸುಮಾರಿಗೆ ನಗರದ ಅಲ್ಲಲ್ಲಿ ಧಾರಾಕಾರವಾಗಿ ಮಳೆ ಸುರಿಯಲು ಆರಂಭವಾಯಿತು. 

ಪ್ರಮುಖವಾಗಿ ಬಸವನಗುಡಿ, ಚಾಮರಾಜಪೇಡೆ, ಮಲ್ಲೇಶ್ವರ, ರಾಜಾಜಿನಗರ, ಹೆಬ್ಬಾಳ, ಹಲಹಂಕ, ಮೈಸೂರು ರಸ್ತೆ, ಕಸ್ತೂರಬಾ ರಸ್ತೆ, ಮೆಜಸ್ಟಿಕ್, ವಿಧಾನಸೌಧ, ರಾಜಭವನ ರಸ್ತೆ, ಎಂಜಿ ರಸ್ತೆ, ಬಸವೇಶ್ವರ ನಗರ ಸೇರಿದಂತೆ ಹಲವಡೆ ಸುಮಾರು 5ರಿಂದ 15 ನಿಮಿಷದವರೆಗೆ ಮಳೆ ಸುರಿಯಿತು. 

ಮಳೆಗಿಂದಲೂ ಹೆಚ್ಚಾಗಿ ಗಾಳಿ, ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟವೇ ಹೆಚ್ಚಾಗಿತ್ತು. ಕೆಲ ಕಾಲದ ಬಳಿಕ ಮಳೆ ಸುರಿದಿದ್ದು, ವಾತಾವರಣ ತಂಪೆನಿಸಿತು. ಆದರೆ, ಕಡಿಮೆ ಮಳೆ ಸುರಿದ ಪರಿಮಾಮ ರಾತ್ರಿ ವೇಳೆಗೆ ಸೆಕೆಯ ಧಗೆ ಹೆಚ್ಚಾಗಿತ್ತು. 

ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಗಾಳಿಯ ಒತ್ತಡ ಕಡಿಮೆಯಾಗಿರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. 

ಶುಗ್ರವಾರ ನಗರದಲ್ಲಿ ಸರಾಸರಿ 4.91 ಮಿ.ಮೀ ಮಳೆಯಾಗಿದ್ದು, ಹೆಚ್ಎಎಲ್ ನಲ್ಲಿ 1 ಮಿ ಮೀ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 3.6 ಮಿಮೀ ಮಳೆಯಾಗಿದೆ. 

ಮಳೆಯ ಪರಿಣಾಮ ವೈರಸ್ ಹರಡುವ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದ್ದು, ಸಾಕಷ್ಟು ಎಚ್ಚರಿಕೆಯಿಂದಿರುವಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. 

ಮಳೆಯ ಪರಿಣಾಮ 2ನೇ ಹಂತದಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಸಾಧ್ಯವಾದಷ್ಟು ಜನರು ಮನೆಗಳಲ್ಲಿಯೇ ಇರುವುದು ಉತ್ತಮ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ವೈರಸ್ ಭೀತಿ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಮನೋಹರ್ ಕೆ.ಎನ್ ಅವರು ಹೇಳಿದ್ದಾರೆ. 

SCROLL FOR NEXT