ಸಾಂದರ್ಭಿಕ ಚಿತ್ರ 
ರಾಜ್ಯ

ಕ್ವಾರಂಟೈನ್ ನಲ್ಲಿದ್ದರೂ ಬೀದಿ ಸುತ್ತಲು ಬಂದವನಿಗೆ ಗ್ರಹಚಾರ ಬಿಡಿಸಿದ ಬೆಂಗಳೂರು ಪೊಲೀಸರು, ಕೇಸ್ ದಾಖಲು!

ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.

ಬೆಂಗಳೂರು: ಇಡೀ ದೇಶವೇ ಕೊರೋನಾ ವೈರಸ್ ಭೀತಿಯಿಂದ ಲಾಕ್ ಡೌನ್ ಆಗಿದ್ದು, ಇದರ ನಡುವೆಯೇ ವಿದೇಶದಿಂದ ಬಂದು ಕ್ವಾರಂಟೈನ್ ನಲ್ಲಿರಬೇಕಾದ ವ್ಯಕ್ತಿ ಬೀದಿ ಸುತ್ತುತ್ತಿರುವುದನ್ನು ಗಮನಿಸಿದ ಬೆಂಗಳೂರು ಪೊಲೀಸರು ಅವನ ಗ್ರಹಚಾರ ಬಿಡಿಸಿದ್ದಾರೆ.

ಹೌದು..ಕೊರೋನಾ ವೈರಸ್ ಸೋಂಕು ಶಂಕಿತರಿಗೆ ಗೃಹ ದಿಗ್ಬಂಧನದಲ್ಲಿರಲು ಆದೇಶ ನೀಡಲಾಗಿದ್ದು, ಅವರು ಹೊರಗೆ ಬರಬಹುದು ಎಂಬ ಕಾರಣಕ್ಕೆ ಹೋಮ್​ ಕ್ವಾರಂಟೈನ್​ನಲ್ಲಿರುವವರ ಕೈ ಮೇಲೆ ಸೀಲ್ ಹಾಕಲಾಗಿದೆ. ಆದರೂ ಸೀಲ್ ಇರುವ ವ್ಯಕ್ತಿಗಳು ಹೊರಗೆ  ಓಡಾಡುತ್ತಿರುವುದರಿಂದ ಅಂಥವರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ಇದೇ ರೀತಿ ಕಳೆದ ಮಾರ್ಚ್ 17ರಂದು ಇಂಡೋನೇಷ್ಯಾದಿಂದ ಬಂದಿದ್ದ ವ್ಯಕ್ತಿಯೋರ್ವ ಬೆಂಗಳೂರಿನ ಥಣಿಸಂದ್ರದಿಂದ ಜಾಲಹಳ್ಳಿ ಕಡೆಗೆ ಬೈಕ್​ನಲ್ಲಿ ಬಂದಿದ್ದ. ಕೈ ಮೇಲಿರುವ ಸೀಲನ್ನು ಗಮನಿಸಿದ ಪೊಲೀಸರು  ಕೂಡಲೇ ಅವನನ್ನು ತಡೆದಿದ್ದಾರೆ. ಈ ವೇಳೆ ಆತ ಬೆಂಗಳೂರು ನೋಡಬೇಕೆಂದು ಹೊರಗೆ ರೌಂಡ್ಸ್​ ಗೆ ಬಂದಿದ್ದೇನೆ ಎಂದು ಅಸಡ್ಡೆಯಿಂದ ಉತ್ತರ ನೀಡಿದ್ದಾನೆ. ಇದರಿಂದ ಕೆಂಡಾ ಮಂಡಲರಾದ ಪೊಲೀಸರು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಅಲ್ಲದೆ ಗೃಹ ಬಂಧನದಲ್ಲಿರದೇ ಬೇಜವಾಬ್ದಾರಿ ವರ್ತನೆ ತೋರಿದ್ದರಿಂದ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೇಸ್ ಕೂಡ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 269, 271 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಆತನನ್ನು ಸಮೀಪದ ಆಕಾಶ್ ಆಸ್ಪತ್ರೆಯ ಸರ್ಕಾರಿ  ಕ್ವಾರಂಟೈನ್​ಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ