ರಾಜ್ಯ

ಕಲಬುರಗಿ: ನಿರ್ಬಂಧದ ನಡುವೆಯೂ ಹೊರಬಂದ ಯುವಕರಿಗೆ ಖಾಕಿ ಪಾಠ, ವಿಡಿಯೋ ವೈರಲ್!

Vishwanath S

ಕಲಬುರಗಿ: ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ ಇದನ್ನು ಪಾಲಿಸದೆ ಹೊರಬಂದವರಿಗೆ ಕರ್ನಾಟಕ ಪೊಲೀಸರು ರಸ್ತೆ ಗುಡಿಸುವ ಶಿಕ್ಷೆ ನೀಡಿದ್ದಾರೆ. 

ರಾಜ್ಯದಲ್ಲಿ ಹಲವೆಡೆ ನಿಯಮ ಪಾಲಿಸದೇ ಹೊರಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಬಸ್ಕಿ ಹೊಡಿಸಿದ್ದರು. ಆದರೆ ಕಲಬುರಗಿಯಲ್ಲಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಾವಶ್ಯ ಬೀದಿಗೆ ಇಳಿದ ಕೆಲವರಿಗೆ ಪೊಲೀಸರು ಪೊರಕೆ ನೀಡಿ ಕಸ ಗುಡಿಸುವ ಶಿಕ್ಷೆ ನೀಡಿದ್ದು ಈ ವಿಡಿಯೋ ಇದೀಗ ವೈರಸ್ ಆಗಿದೆ. 

ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಇಬ್ಬರು ಬಲಿಯಾಗಿದ್ದು ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

ವಿಡಿಯೋ ಕೃಪೆ: ಯೂಟ್ಯೂಬ್ 

SCROLL FOR NEXT